ಡಿ.ಕೆ.ಸುರೇಶ್ ಹೆಸರೇಳಿ ಚಿನ್ನ ವಂಚನೆ ಕೇಸ್ – ಯಾವುದೇ ಕ್ಷಣದಲ್ಲಿ ನಟ ಧರ್ಮೇಂದ್ರ ಬಂಧನ ಸಾಧ್ಯತೆ

Public TV
1 Min Read

– ಬಂಧನ ಭೀತಿಯಲ್ಲಿ ನಿರೀಕ್ಷಣಾ ಜಾಮೀನಿಗೆ ನಟ ಅರ್ಜಿ ಸಲ್ಲಿಕೆ

ಬೆಂಗಳೂರು: ವರಾಹಿ ಜ್ಯುವೆಲ್ಲರ್ಸ್ ಮಾಲೀಕರಿಗೆ ವಂಚನೆ ಪ್ರಕರಣದಲ್ಲಿ ನಟ ಧರ್ಮೇಂದ್ರನನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ. ಬಂಧನ ಭೀತಿಯಿಂದಾಗಿ ನಟ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸ್ ನೋಟಿಸ್ ಸರ್ವ್ ಆಗುತ್ತಿದ್ದಂತೆ ನಟನ ಫೋನ್ ಸ್ವಿಚ್ ಆಫ್ ಆಗಿದೆ. ಬೆಂಗಳೂರಿನ ಮನೆಯಲ್ಲಿಯೂ ನಟ ಧರ್ಮೇಂದ್ರ ಪತ್ತೆಯಿಲ್ಲ. ಎಫ್‌ಐಆರ್ ದಾಖಲಾಗ್ತಿದ್ದಂತೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ನಟ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಐಶ್ವರ್ಯ ಗೌಡ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ – ಕಾಂಗ್ರೆಸ್‌ ಮುಖಂಡನಿಗೂ ಕೋಟಿ ಕೋಟಿ ವಂಚನೆ ಆರೋಪ

ಐಶ್ವರ್ಯ ಗೌಡ ಹಾಗೂ ಹರೀಶ್ ಬಂಧನ ಆಗುತ್ತಿದ್ದಂತೆ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ನಟ ಧರ್ಮೇಂದ್ರ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಿ ಚಂದ್ರಲೇಔಟ್ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನಲ್ಲಿ ಧರ್ಮೇಂದ್ರ 3ನೇ ಆರೋಪಿ ಆಗಿದ್ದಾರೆ. ಡಿ.ಕೆ.ಸುರೇಶ್ ಅವರಂತೆ ಹಲವರ ಜೊತೆ ಮಾತಾಡಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಸಿಲಿಂಡರ್‌ ಸ್ಫೋಟ ಕೇಸ್‌; ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು – ಮೃತರ ಸಂಖ್ಯೆ 5 ಕ್ಕೆ ಏರಿಕೆ

Share This Article