ಇನ್ಮುಂದೆ ಡೈರೆಕ್ಷನ್‌ಗೆ ಜಾಸ್ತಿ ಗ್ಯಾಪ್ ಕೊಡಲ್ಲ: ‘ಯುಐ’ ಸಕ್ಸಸ್ ಮೀಟ್‌ನಲ್ಲಿ ಉಪ್ಪಿ ಮಾತು

Public TV
1 Min Read

– ಉಪ್ಪಿ ಅವರಿಗೆ 5 ಮಿದುಳಿವೆ ಎಂದ ಲಹರಿ ವೇಲು

ರ್ನಾಟಕವಷ್ಟೇ ಅಲ್ಲದೇ ದೇಶ-ವಿದೇಶದಲ್ಲೂ ಯುಐ (UI Movie) ಸಿನಿಮಾ ಭರ್ಜರಿ ಸಕ್ಸಸ್ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ (Bengaluru) ಖಾಸಗಿ ಹೋಟೇಲ್‌ನಲ್ಲಿ ಸಕ್ಸಸ್ ಮೀಟ್ ಏರ್ಪಡಿಸಲಾಗಿತ್ತು. ಸಕ್ಸಸ್ ಮೀಟ್‌ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra), ನಟಿ ರೀಷ್ಮಾ ನಾಣಯ್ಯ (Reeshma Nanaiah), ಲಹರಿ ವೇಲು, ಕೆಪಿ ಶ್ರೀಕಾಂತ್, ಜಿ ಮನೋಹರನ್ ಮುಂತಾದವ್ರು ಭಾಗಿಯಾಗಿದ್ದರು. ಈ ವೇಳೆ ಸಿನಿಮಾ ತಂಡದಿಂದ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತ್ತು.

ನಟ, ನಿರ್ದೇಶಕ ಉಪೇಂದ್ರ ಮಾತನಾಡಿ, ನಾನು ಅನ್ಕೊಂಡಕ್ಕಿನ್ನ ಜಾಸ್ತಿ ಡಿಕೋಡಿಂಗ್ ಮಾಡಿದ್ದಾರೆ. ಎಲ್ಲರೂ ತುಂಬಾ ಚನ್ನಾಗಿ ರಿವೀವ್ಸ್ ಮಾಡಿದ್ದಾರೆ. ಕ್ರೆಡಿಟ್ ಎಲ್ಲ ಮಾಧ್ಯಮದವರಿಗೆ ಕೊಡ್ಬೇಕು. ಡೈರೆಕ್ಷನ್‌ಗೆ ಜಾಸ್ತಿ ಗ್ಯಾಪ್ ಕೊಡೊಲ್ಲ ಇನ್ಮೇಲೆ ಎಂದರು. ಮುಂದುವರಿದು, ಬ್ಲ್ಯಾಕ್ ವೈಟ್ ಡ್ರೆಸ್ ಪ್ರಶ್ನೆಗೆ ಉತ್ತರಿಸಿ, ವೈಟ್‌ನಲ್ಲಿ ಬಂದ್ರೆ ಹೊಡೆದು ಸಾಯಿಸ್ತಿರಲ್ಲ. ಸನ್ನಿಲಿಯೋನ್ ಸಿನಿಮಾದಲ್ಲಿ ಇದಾರೆ ಅಂತಾ ರೂಮರ್ಸ್ ಹಬ್ಬಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಉಪೇಂದ್ರ ನಟನೆಯ UI ನೋಡಲು ಬಂದ ಸ್ಯಾಂಡಲ್‌ವುಡ್ ತಾರೆಯರು

ಲಹರಿ ವೇಲು (Lahari Velu) ಮಾತನಾಡಿ, ಉಪ್ಪಿ ಅವರಿಗೆ ಐದು ಮಿದುಳಿವೆ. ಒಂದು ಆ್ಯಂಗಲ್‌ನಲ್ಲಿ ನಾವು ಯೋಚಿಸ್ತಿದ್ರೆ, ಉಪೇಂದ್ರ ಐದು ಪಟ್ಟು ಮುಂದಿರ್ತಾರೆ. ಉಪ್ಪಿ ಕಂಟೆಂಟ್ ಕಿಂಗ್ ಎಂದು ಹೊಗಳಿದರು.

ಎರಡನೇ ವಾರ 1500 ಸ್ಕ್ರೀನ್‌ಗಳಲ್ಲಿ ‘ಯುಐ’ ಸಿನಿಮಾ ಅಬ್ಬರಿಸುತ್ತಿದೆ. ಕರ್ನಾಕವಷ್ಟೇ ಅಲ್ಲದೇ ದೇಶ-ವಿದೇಶದಲ್ಲೂ ಎರಡನೇ ವಾರವೂ ಆರ್ಭಟ ಶುರುಮಾಡಿದೆ. ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುತ್ತಾ ಮುನ್ನುಗ್ಗಿದೆ. ಉಪೇಂದ್ರ ಅವರು ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾವಿದು. 10 ವರ್ಷಗಳ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟ ಯುಐಗೆ ನಿರೀಕ್ಷೆ ಮೀರಿ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ: UI ಚಿತ್ರವನ್ನು ಮೆಚ್ಚಿದ ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್

Share This Article