ಉಪೇಂದ್ರ ನಟನೆಯ UI ನೋಡಲು ಬಂದ ಸ್ಯಾಂಡಲ್‌ವುಡ್ ತಾರೆಯರು

By
1 Min Read

ರಿಯಲ್ ಸ್ಟಾರ್ ಉಪೇಂದ್ರ ನಟನೆಯ UI ಸಿನಿಮಾ ಡಿ.20ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಇಂದು (ಡಿ.23) ಓರಾನ್ ಮಾಲ್‌ನಲ್ಲಿ ಈ ಚಿತ್ರದ ಪ್ರಿಮಿಯರ್‌ಗೆ ಸ್ಯಾಂಡಲ್‌ವುಡ್ ನಟ- ನಟಿಯರು ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಧೀಮಂತ ವ್ಯಕ್ತಿತ್ವ ಎಸ್‌.ಎಂ. ಕೃಷ್ಣ ಅವರದಾಗಿತ್ತು: ಯಶ್

ಉಪೇಂದ್ರ ತಂಡದ ಜೊತೆ ಯುಐ ಸಿನಿಮಾ ವೀಕ್ಷಿಸಲು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಮೇಘನಾ ಗಾಂವ್ಕರ್, ಬಿಗ್ ಬಾಸ್ ಖ್ಯಾತಿಯ ಹಂಸ, ಪ್ರಿಯಾಂಕಾ ಉಪೇಂದ್ರ, ಅನುಪ್ರಭಾಕರ್ ದಂಪತಿ, ಸೋನು ಗೌಡ, ಗುರುಕಿರಣ್, ಡಿ.ವಿ ಸದಾನಂದ ಗೌಡ, ಆರ್.‌ ಚಂದ್ರು ಸೇರಿದಂತೆ ಅನೇಕರು ಆಗಮಿಸಿದ್ದಾರೆ.

ಅಂದಹಾಗೆ, UI ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ನಟ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ UI ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

Share This Article