ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ದರ್ಶನ್ ಪತ್ನಿ

Public TV
1 Min Read

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೇಲ್ ಸಿಕ್ಕ ಹಿನ್ನೆಲೆ ವಿಜಯಲಕ್ಷ್ಮಿ (Vijayalakshmi) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದೊಂದಿಗೆ ವಿಜಯಲಕ್ಷ್ಮಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ:UI ಚಿತ್ರವನ್ನು ಮೆಚ್ಚಿದ ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್

ದರ್ಶನ್‌ಗೆ (Darshan) ಜಾಮೀನು ಸಿಕ್ಕ ಹಿನ್ನೆಲೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಹೊರತುಪಡಿಸಿ ಕುಟುಂಬ ಸಮೇತವಾಗಿ ತೆರಳಿದ್ದಾರೆ. ದಿನಕರ್, ಮೀನಾ ತೂಗುದೀಪ, ವಿಜಯಲಕ್ಷ್ಮಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸದ್ಯ ನಟ ಅವರ ಮೈಸೂರಿನ ತೋಟದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇನ್ನೂ ದರ್ಶನ್ ನಟಿಸುತ್ತಿದ್ದ ‘ಡೆವಿಲ್’ (Devil) ಸಿನಿಮಾದ ಶೂಟಿಂಗ್ ಜ.20ರ ನಂತರ ಶುರುವಾಗಲಿದೆ ಎನ್ನಲಾಗಿದೆ.

Share This Article