Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

Public TV
2 Min Read

– ಕ್ರಿಸ್ಮಸ್‌ ಆಚರಣೆಗೆ ತೆರಳುತ್ತಿದ್ದ ಕುಟುಂಬ ಮಸಣಕ್ಕೆ

ಬ್ರೆಸಿಲಿಯಾ: ಬ್ರೆಜಿಲ್‌ನ (Brazil) ಪ್ರವಾಸಿ ನಗರವಾದ ಗ್ರಾಮಡೊದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 10 ಮಂದಿ ಪ್ರಯಾಣಿಕರೂ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬ್ರೆಜಿಲ್‌ನ ಸಿವಿಲ್ ಡಿಫೆನ್ಸ್ ಏಜೆನ್ಸಿಯ ಪ್ರಕಾರ, ವಿಮಾನವು ಮನೆಯೊಂದರ ಚಿಮಣಿಗೆ ತಾಕಿದೆ, ನಂತರ ಕಟ್ಟಡದ 2ನೇ ಮಹಡಿಗೆ ಅಪ್ಪಳಿಸಿದೆ. ಬಳಿಕ ಗ್ರಾಮಡೋದ ಕೆಲ ಮಳಿಗೆಗಳಿಗೂ ಅಪ್ಪಳಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಸಾವೊ ಪಾಲೊ ರಾಜ್ಯಕ್ಕೆ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಬ್ರೆಜಿಲ್‌ನ ಉದ್ಯಮಿ ಲೂಯಿಸ್ ಕ್ಲೌಡಿಯೊ ಗಲೇಜಿ ಅವರು ವಿಮಾನವನ್ನ ಪೈಲಟ್ ಮಾಡಿದ್ದಾರೆ. 61 ವರ್ಷದ ಉದ್ಯಮಿ ತನ್ನ ಪತ್ನಿ, ಮೂವರು ಹೆಣ್ಣುಮಕ್ಕಳು, ಕುಟುಂಬದ ಇತರ ಸದಸ್ಯರು ಹಾಗೂ ತನ್ನ ಕಂಪನಿಯ ಸಹೋದ್ಯೋಗಿಗಳು ಸೇರಿ 10 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಎಲ್ಲಾ 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ವಿಮಾನ ಅಪ್ಪಳಿಸಿ ಗಾಯಗೊಂಡಿರುವ ಸುಮಾರು 15 ಮಂದಿಯನ್ನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಅಪಘಾತಕ್ಕೀಡಾದ ಉದ್ಯಮಿ ಕುಟುಂಬಸ್ಥರು ಕ್ರಿಸ್ಮಸ್‌ ಆಚರಣೆಗಾಗಿ ಪ್ರವಾಸಿ ನಗರಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಪರ್ವತ ಪ್ರದೇಶದಲ್ಲಿರುವ ಗ್ರಾಮಡೊ ಸೆರಾ ಗೌಚಾ ಗ್ರಾಮವು ಪ್ರವಾಸಿಗರ ಆಕರ್ಷಣಿಯ ಸ್ಥಳ ಎಂದೇ ಜನಪ್ರಿಯವಾಗಿದೆ. 19ನೇ ಶತಮಾನದಲ್ಲಿ ಜರ್ಮನ್‌ ಮತ್ತು ಇಟಾಲಿಯನ್‌ ವಲಸಿಗರಿಂದ ಈ ಪ್ರದೇಶವಾಗಿ ನಿರ್ಮಾಣವಾಯಿತು ಎನ್ನಲಾಗಿದೆ. ಈಗಲೂ ಕ್ರಿಸ್ಮಸ್‌ ದಿನಗಳಲ್ಲಿ ಇಲ್ಲಿಹೆ ಯಾರೂ ಊಹಿಸದಷ್ಟು ಪ್ರವಾಸಿಗರು ಪ್ರವಾಸ ಕೈಗೊಳ್ಳುತ್ತಾರೆ.

ಬ್ರೆಜಿಲ್ ಮಿನಾಸ್ ಗೆರೈಸ್‌ (Minas Gerais) ರಾಜ್ಯದ ಫೆರ್ನಾವೊ ಡಯಾಸ್ ರಾಷ್ಟ್ರೀಯ ಹೆದ್ದಾರಿಯ (Fernao Dias National Highway) ಲಾಜಿನ್ಹಾ ಪಟ್ಟಣದ ಬಳಿ ಕಳೆದ ಒಂದು ದಿನದ ಹಿಂದೆಯಷ್ಟೇ ಬಸ್ ಟೈರ್ ಸ್ಫೋಟಗೊಂಡು 37 ಮಂದಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದಾದ ಮರುದಿನವೇ ಮತ್ತೊಂದು ದುರಂತ ಸಂಭವಿಸಿದೆ. ಇದನ್ನೂ ಓದಿ: ತಮಿಳುನಾಡು ಅರಣ್ಯ ಪ್ರದೇಶದಿಂದ ರಾಜ್ಯಕ್ಕೆ ಕಾಡಾನೆಗಳು ಎಂಟ್ರಿ – ರೈತರು, ಕಾಫಿ ಬೆಳೆಗಾರರು ಹೈರಾಣು

Share This Article