Bengaluru| ಕೌಟುಂಬಿಕ ಕಲಹದಿಂದ ಮನನೊಂದು ಕ್ರಿಕೆಟ್ ಪಟು ನೇಣಿಗೆ ಶರಣು

Public TV
1 Min Read

ಬೆಂಗಳೂರು: ಕೌಟುಂಬಿಕ ಕಲಹದಿಂದ (Family Dispute) ಮನನೊಂದು ಕ್ರಿಕೆಟ್ ಪಟು ನೇಣಿಗೆ ಶರಣಾದ ಘಟನೆ ಸೋಲದೇವನಹಳ್ಳಿ (Soladevanahalli) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲರಾಜ್ (41) ಆತ್ಮಹತ್ಯೆಗೆ ಶರಣಾದ ಕ್ರಿಕೆಟ್ ಪಟು. ಹೆಸರಘಟ್ಟ (Hesaraghatta) ರಸ್ತೆ ಬಳಿಯ ಸಿಲುವೆಪುರದಲ್ಲಿ ಘಟನೆ ನಡೆದಿದೆ. ಬಾಲರಾಜ್ 18 ವರ್ಷದ ಹಿಂದೆ ಪತ್ನಿ ಕುಮಾರಿಯನ್ನು ಎರಡನೇ ಮದುವೆಯಾಗಿದ್ದ. ಗ್ರಾಮಾಂತರ ಭಾಗದಲ್ಲಿ ಕ್ರಿಕೆಟ್ ಪಟುವಾಗಿದ್ದ ಬಾಲರಾಜ್ ಹೆಂಡತಿ ಕಿರುಕುಳದ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪವನ್ನು ಎದುರಿಸುತ್ತಿದ್ದ. ಈ ಸಂಬಂಧ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಗಲಾಟೆ ಬಳಿಕ ಬಾಲರಾಜ್ ಪತ್ನಿ ಮನೆ ತೊರೆದು ತವರು ಸೇರಿದ್ದಳು. ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ ಒಂದು ದೇಶ ಒಂದು ಚುನಾವಣೆ ಮಸೂದೆ

 ಇತ್ತ ಯಾರೂ ಇಲ್ಲದ ವೇಳೆ ಡೆತ್‌ನೋಟ್ ಬರೆದು ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಬಾಲರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹದ ಜೊತೆ ತಾನು ಪಡೆದಿದ್ದ ಟ್ರೋಫಿ, ಬ್ಯಾಟ್, ಬಾಲ್, ವಿಕೆಟ್ ಇಡುವಂತೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೊನೆಯ ಆಸೆಯಂತೆ ಶವದ ಪೆಟ್ಟಿಗೆಯಲ್ಲಿ ಎಲ್ಲವನ್ನೂ ಇಟ್ಟು ಅಂತಿಮ ಸಂಸ್ಕಾರ ಮಾಡಲಾಗಿದೆ. ಘಟನೆ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದುರ್ಗಾದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ದೇವಿಯ ಕೋಣ ನಾಪತ್ತೆ- ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

Share This Article