ಕೊಲ್ಲಾಪುರದ ಕಾಳಮ್ಮವಾಡಿ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಸೋರಿಕೆ

Public TV
0 Min Read

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರ (Kolhapur) ಜಿಲ್ಲೆಯ ಕಾಳಮ್ಮವಾಡಿ ಜಲಾಶಯದಿಂದ (Kalammawadi Dam) ಭಾರೀ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ.

ಕಳೆದ ಒಂದು ವಾರದಿಂದ ಭಾರೀ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಜಲಾಶಯದಿಂದ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆ, ಜಲಾಶಯವನ್ನು ಅವಲಂಭಿಸಿರುವ ರೈತರು ಆತಂಕ್ಕೊಳಗಾಗಿದ್ದಾರೆ. ಇನ್ನೂ ಮಹಾರಾಷ್ಟ್ರ ಸರ್ಕಾರ ಖಾಸಗಿ ಕಂಪನಿಯ ಸಹಕಾರದೊಂದಿಗೆ ಡ್ಯಾಂ ದುರಸ್ಥಿಗೆ ಮುಂದಾಗಿದೆ.

ಕರ್ನಾಟಕದ ಗಡಿಯಲ್ಲಿರುವ ಕಾಳಮ್ಮವಾಡಿ ಜಲಾಶಯವನ್ನು ದೂದ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ 1.5 ಟಿಎಂಸಿ ಸಾಮರ್ಥ್ಯ ಹೊಂದಿದೆ.

Share This Article