ಸರ್ಕಾರಿ ಆಸ್ಪತ್ರೆಗಳ ಶುಲ್ಕ ಹೆಚ್ಚಳ ವಾಪಸ್ ಪಡೆಯಿರಿ: ಟಿ.ಎ ಶರವಣ ಆಗ್ರಹ

Public TV
1 Min Read

ಬೆಂಗಳೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿರೋ ವಿಚಾರ ವಿಧಾನ ಪರಿಷತ್ ‌ನಲ್ಲಿ ಇಂದು ಪ್ರಸ್ತಾಪ ಆಯ್ತು. ಶುಲ್ಕ ಏರಿಕೆಯನ್ನ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ (TA Saravana) ಪ್ರಶ್ನೆ ಕೇಳಿದ್ರು. ಈ ಸರ್ಕಾರ, ಸಿಎಂ ಅವರು ಯಾವುದಕ್ಕೂ ಜಗ್ಗಲ್ಲ, ಬಗ್ಗೊಲ್ಲ ಅಂತಾರೆ. ಸರ್ಕಾರಿ ಆಸ್ಪತ್ರೆಗಳಿಗೆ (Government Hospital) ಜನ ದುಡ್ಡು ಇಲ್ಲ ಅಂತ ಹೋಗೋದು. ಈಗ ಆಸ್ಪತ್ರೆಗಳ ಶುಲ್ಕ 3 ಪಟ್ಟು ಹಣ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿಗಳನ್ನ ಕೊಡ್ತಿದ್ದೀರಾ, ಒಂದು ಕೈಯಲ್ಲಿ ‌ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ ಈ‌ ಸರ್ಕಾರ. ಬಡವರಿಗೆ ಮಾತ್ರ ಹಣ ಜಾಸ್ತಿ ಮಾಡಿದ್ದೀರಾ? ಸರ್ಕಾರಿ ಆಸ್ಪತ್ರೆಯಲ್ಲಿ ಇರೋ VIP ಕೊಠಡಿಗೆ ಶುಲ್ಕ ಜಾಸ್ತಿ ಮಾಡಿಲ್ಲ. ಕೂಡಲೇ ಆಸ್ಪತ್ರೆಗಳ ದರ ಹೆಚ್ಚಳ ಮಾಡಿರೋ ಆದೇಶ ವಾಪಸ್ ತೆಗೆದುಕೊಳ್ಳಿ ಅಂತ ಶರವಣ ಆಗ್ರಹ ಮಾಡಿದ್ರು. ಇದನ್ನೂ ಓದಿ: ಎರಡೂವರೆ ತಿಂಗಳಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಪದೋನ್ನತಿ: ಮಧು ಬಂಗಾರಪ್ಪ

ಇದಕ್ಕೆ ಸಚಿವ ಶರಣು ಪ್ರಕಾಶ್ ಪಾಟೀಲ್ (Sharanu Prakash Patil) ಉತ್ತರ ನೀಡಿ, 2 ಪಟ್ಟು 3 ಪಟ್ಟು ನಾನು ಶುಲ್ಕವನ್ನು ಹೆಚ್ಚಳ ಮಾಡಿಲ್ಲ. 20% ಮಾತ್ರ ಶುಲ್ಕ ಪರಿಷ್ಕರಣೆ ಮಾಡಿದ್ದೇವೆ.‌ ಶುಲ್ಕ ಹೆಚ್ಚಳ ಮಾಡಿರೋದು ಸತ್ಯ. ಆದ್ರೆ ಇದು ಸರ್ಕಾರದ ಮಟ್ಟದಲ್ಲಿ ‌ಮಾಡಿಲ್ಲ. ಸಂಸ್ಥೆ ಮಟ್ಟದಲ್ಲಿ ಜಾಸ್ತಿ ಆಗಿದೆ. 3 ವರ್ಷಕ್ಕೆ ಪರಿಷ್ಕರಣೆ ಆಗಬೇಕಿತ್ತು. ಕೋವಿಡ್ ಹಿನ್ನಲೆಯಲ್ಲಿ ಆಗಿರಲಿಲ್ಲ ಈಗ 6 ವರ್ಷಗಳ ನಂತರ ಜಾಸ್ತಿ ಮಾಡಿದ್ದೇವೆ ಎಂದರು. ಶುಲ್ಕ ಹೆಚ್ಚಳದಿಂದ ಬಡವರಿಗೆ ಸಮಸ್ಯೆ ಆಗಿಲ್ಲ ಅಂತ ಸರ್ಕಾರಿ ಆಸ್ಪತ್ರೆಗಳ ಶುಲ್ಕ ಸಮರ್ಥನೆ ಮಾಡಿಕೊಂಡ್ರು. ಇದನ್ನೂ ಓದಿ: ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ

Share This Article