ಸಿದ್ದರಾಮಯ್ಯ ರಾಜಕೀಯ ಬಿಡುವ ಮಾತೇ ಇಲ್ಲ: ಎಸ್ಎನ್ ನಾರಾಯಣಸ್ವಾಮಿ

Public TV
2 Min Read

-ರಾಜಕೀಯ ಕೊನೆಯಾಗುತ್ತಿದೆ ಎಂದರೆ ವಯಸ್ಸಾಗುತ್ತಿದೆ ಎಂದರ್ಥ
– ನಾನು ಸಚಿವ ಆಕಾಂಕ್ಷಿ ಎಂದ ಬಂಗಾರಪೇಟೆ ಶಾಸಕ

ಕೋಲಾರ: ಸಿದ್ದರಾಮಯ್ಯ (Siddaramaiah) ರಾಜಕೀಯ ಬಿಡುವ ಮಾತೇ ಇಲ್ಲ. ರಾಜಕೀಯ (Politics) ಕೊನೆಯಗುತ್ತಿದೆ ಎಂದರೆ ವಯಸ್ಸಾಗುತ್ತಿದೆ ಎಂದು ಅರ್ಥ ಎಂದು ಕೋಲಾರದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Narayanaswamy) ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಸ್.ಎನ್ ಸಿಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇಷ್ಟು ವರ್ಷ ರಾಜಕಾರಣ ಮಾಡಿದ್ದಾರೆ. ಇನ್ನೂ ಎಷ್ಟು ವರ್ಷ ಮಾಡಲು ಸಾಧ್ಯ ಎಂಬ ದಾಟಿಯಲ್ಲಿ ಹೇಳಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಗಟ್ಟಿಯಾಗಿರುವವರೆಗೂ ಅವರು ಈ ರಾಜ್ಯಕ್ಕೆ ಬೇಕು, ಅವರ ಸೇವೆ ಬೇಕು. ಸಿದ್ದರಾಮಯ್ಯನವರ ಜೀವನಪರ್ಯಂತ ನಿವೃತ್ತಿ ಮಾತಿಲ್ಲ. ರಾಜಕೀಯವಾಗಿ ಇದ್ದೇ ಇರುತ್ತಾರೆ ಎಂದರು. ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ – ಹೋರಾಟ ಹತ್ತಿಕ್ಕಲು ಅಶ್ರುವಾಯು ಪ್ರಯೋಗ

ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರವಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಈ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಹೈಕಮಾಂಡ್ ಮಾತಿಗೆ ಬದ್ಧರಾಗಿರುತ್ತೇವೆ. ಸದ್ಯಕ್ಕೆ ಸಿದ್ದರಾಮಯ್ಯನವರ ಕುರ್ಚಿ ಖಾಲಿ ಇಲ್ಲ. ಕುರ್ಚಿ ಬಿಡಿ ಎಂದು ಯಾರೂ ಹೇಳುತ್ತಿಲ್ಲ. ಆದರೆ ವಿರೋಧ ಪಕ್ಷದವರ ಬೊಬ್ಬೆ ಬಿಟ್ಟರೆ, ನಮ್ಮ ಪಕ್ಷದಲ್ಲಿ ಯಾರೂ ಸಹ ಬಿಡಿ ಎಂದು ಹೇಳುತ್ತಿಲ್ಲ ಎಂದು ನುಡಿದರು. ಇದನ್ನೂ ಓದಿ: ದೇಶ ತೊರೆಯುತ್ತಿದ್ದ ಸಿರಿಯಾ ಅಧ್ಯಕ್ಷನಿದ್ದ ವಿಮಾನ ಕಣ್ಮರೆ – ಕ್ಷಿಪಣಿ ದಾಳಿಗೆ ಪತನ?

ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾನ 138 ಆಗಿದೆ. ಬಲ ಜಾಸ್ತಿ ಆಗಿದೆ. ಅಧಿಕಾರ ಪ್ರಸ್ತಾಪ ಪಬ್ಲಿಕ್‌ನಲ್ಲಿ ಆಗಿಲ್ಲ, ನಮ್ಮಲ್ಲೂ ಸಹ ಆಗಿಲ್ಲ. ಸಿಎಂ, ಡಿಸಿಎಂ, ಇಬ್ಬರ ನಡುವೆ ಒಪ್ಪಂದಕ್ಕೆ ಬಂದಿರಬಹುದು. ಆದರೆ ಇದರ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲ. ಅವರ ಮನಸ್ಸಿಗೆ ತಕ್ಕಂತೆ ಕೆಲವರು ಮಾತನಾಡಿರಬಹುದು. ಬಹಿರಂಗವಾಗಿ, ಶಾಸಕಾಂಗ ಸಭೆಯಲ್ಲಿ ಇಬ್ಬರು ನಾಯಕರು ಒಪ್ಪಂದ ಆಗಿದೆ ಎಂದು ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಕೇಸ್ – ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆ

ಬೆಳಗಾವಿ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಮತ್ತು ಸಚಿವ ಸಂಪುಟ ಆಗುವುದಿಲ್ಲ. ನಾನು ಸಚಿವ ಆಕಾಂಕ್ಷಿ. ಅತಿ ಹೆಚ್ಚು ಬಲಗೈ ಸಮುದಾಯ ಇರುವ ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಶಾಸಕ ಅಭಿವೃದ್ಧಿ ಮಾಡಲು ನನಗೆ ಅವಕಾಶ ಕೊಟ್ಟರೆ ಮಾಡುವೆ. ಸಚಿವ ಸ್ಥಾನಕ್ಕೆ ಒತ್ತಾಯ ಮಾಡಲ್ಲ. ಇನ್ನೂ ಎರಡೂವರೆ ವರ್ಷದ ನಂತರ ಸಚಿವ ಸ್ಥಾನ ನೀಡುವ ಭರವಸೆ ಖರ್ಗೆ ಅವರು ನೀಡಿದ್ದಾರೆ. ಸಿಎಂ, ಡಿಸಿಎಂ ಅವರು ಸಹ ಭರವಸೆ ನೀಡಿದ್ದಾರೆ. ಜವಾಬ್ದಾರಿ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗಲ್ಲ, ಏಪ್ರಿಲ್‌ನಲ್ಲಿ ಆಗಬಹುದು ಎಂದು ಹೇಳಿದರು. ಇದನ್ನೂ ಓದಿ: `ಮಹಾ’ ಸ್ಪೀಕರ್ ಹುದ್ದೆಗೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ನಾಮಪತ್ರ ಸಲ್ಲಿಕೆ

Share This Article