ನಾನು 3 ನಿಮಿಷ ಮಾತ್ರ ಸ್ಥಳದಲ್ಲಿ ಕುಳಿತಿದ್ದೆ, 30 ನಿಮಿಷ ಕ್ಯಾಂಟೀನ್‌ನಲ್ಲಿ ಇದ್ದೆ: ಮನುಸಿಂಘ್ವಿ

Public TV
2 Min Read

– ನಾನು ಕುಳಿತಿದ್ದ ಸ್ಥಳದಲ್ಲಿ ಹಣ ಸಿಕ್ಕಿದೆ ಎಂದಾಗ ಆಶ್ಚರ್ಯವಾಯಿತು ಎಂದ ಸಂಸದ

ನವದೆಹಲಿ: ಕಾಂಗ್ರೆಸ್ ಸಂಸದ ಅಭಿಷೇಕ್ ಮನುಸಿಂಘ್ವಿ (Abhishek Singhvi) ಸೀಟ್ ನಂಬರ್ 222 ರಲ್ಲಿ 500 ರೂ. ಹಣದ ನೋಟುಗಳು ಸಿಕ್ಕಿವೆ. ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ ಹಣ ಕಂಡುಬಂದಿದ್ದು, ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸದನದಲ್ಲಿ ಕೋಲಾಹಲ ಎದ್ದಿತು. ಘಟನೆ ಕುರಿತು ಮನುಸಿಂಘ್ವಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವೀಡಿಯೋವೊಂದರಲ್ಲಿ ಮಾತನಾಡಿರುವ ಅವರು, ಈ ಬಗ್ಗೆ ಕೇಳಿ ನನಗೆ ಆಶ್ಚರ್ಯವಾಗಿದೆ. ನಿನ್ನೆ ಮಧ್ಯಾಹ್ನ 12.57ಕ್ಕೆ ಸದನದ ಒಳಗೆ ತಲುಪಿದ್ದೆ. ಮಧ್ಯಾಹ್ನ 1 ಗಂಟೆಗೆ ಸದನ ಏರಿತು. ಮಧ್ಯಾಹ್ನ 1 ರಿಂದ 1.30ರ ವರೆಗೆ ನಾನು ಅಯೋಧ್ಯೆ ಸಂಸದ ಅವದೇಶ್ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್‌ನಲ್ಲಿ ಕುಳಿತು ಊಟ ಮಾಡಿದೆ. ನಾನು ಮಧ್ಯಾಹ್ನ 1.30ಕ್ಕೆ ಸಂಸತ್ತನ್ನು ಬಿಟ್ಟೆ. ಹೀಗಾಗಿ ನಿನ್ನೆ ಸದನದಲ್ಲಿ ಒಟ್ಟು 3 ನಿಮಿಷ, ಕ್ಯಾಂಟೀನ್‌ನಲ್ಲಿ 30 ನಿಮಿಷ ಇದ್ದೆ. ಇಂತಹ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿರುವುದು ನನಗೆ ವಿಚಿತ್ರವೆನಿಸುತ್ತದೆ. ಸಹಜವಾಗಿ ಜನರು ಎಲ್ಲಿಯಾದರೂ ಮತ್ತು ಯಾವುದೇ ಆಸನದಲ್ಲಿ ಏನನ್ನು ಇರಿಸಬಹುದು ಎಂಬುದರ ಕುರಿತು ತನಿಖೆ ನಡೆಯಬೇಕು ಎಂದಿದ್ದಾರೆ. ಇದನ್ನೂ ಓದಿ: MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

ಇದರರ್ಥ ನಮಗೆ ಇರುವ ಆಸನವನ್ನು ಲಾಕ್ ಮಾಡಬಹುದು, ಲಾಕ್‌ ಮಾಡಿ ಸಂಸದರೇ ತಮ್ಮೊಂದಿಗೆ ಕೀಲಿ ತೆಗೆದುಕೊಂಡು ಹೋಗಬಹುದು. ಏಕೆಂದರೆ ಎಲ್ಲರೂ ಅಸನದ ಮೇಲೆ ಕುಳಿತು ಏನು ಬೇಕಾದರೂ ಮಾಡಬಹುದು, ಇದರಿಂದ ಆರೋಪಗಳನ್ನು ಮಾಡಬಹುದು. ಆದ್ರೆ ಮಾಡುವಂತರ ಆರೋಪಗಳು ಗಂಭೀರವಾಗಿಲ್ಲದಿದ್ದಾಗ ನಗೆಪಾಟಲಿಗೀಡಾಗುತ್ತದೆ. ಘಟನೆ ಕುರಿತು ನಾನು ಭದ್ರತಾ ಏಜೆನ್ಸಿಗಳಿಗೆ ಮನವಿ ಮಾಡುತ್ತೇನೆ. ಏನಾದ್ರೂ ಲೋಪವಿದ್ದರೆ ಅದನ್ನು ಸಹ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಏನಿದು ಘಟನೆ?
ಕಾಂಗ್ರೆಸ್ ಸಂಸದ ಅಭಿಷೇಕ್ ಮನುಸಿಂಘ್ವಿ ಸೀಟಿನಲ್ಲಿ ಹಣದ ನೋಟುಗಳು ಪತ್ತೆಯಾಗಿತ್ತು. ರಾಜ್ಯಸಭೆಯ ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿತ್ತು. ಗುರುವಾರ (ಡಿ.5) ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ ಹಣ ಕಂಡುಬಂದಿತ್ತು. ಹಣ ಪತ್ತೆಯಾಗಿರುವ ಬಗ್ಗೆ ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದ್ದರು. ಇದನ್ನೂ ಓದಿ: ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ಸೀಟ್‌ನಲ್ಲಿತ್ತು 50 ಸಾವಿರ ಹಣ

ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿ ಜಗದೀಪ್ ಧನ್ಕರ್ ಮಾತನಾಡಿದರು. ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತನಿಖೆಗೂ ಮೊದಲೇ ಸದಸ್ಯರ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿದ್ದರು. ಆದರೆ, ಈ ಆರೋಪಗಳನ್ನು ಮನುಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. ನಾನು ರಾಜ್ಯಸಭೆಗೆ ಹೋಗುವಾಗ 500 ರೂ. ನೋಟು ಮಾತ್ರ ನನ್ನ ಬಳಿ ಇತ್ತು. ಕಲಾಪದ ಬಳಿಕ 1:30ಕ್ಕೆ ಕಲಾಪಕ್ಕೆ ಬಂದಿದ್ದೇನೆ. ಬಳಿಕ ಸಂಸತ್‌ನಿಂದ ನಿರ್ಗಮಿಸಿದ್ದೇನೆ. ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಅಮೇರಿಕ ರಾಯಭಾರ ಕಚೇರಿ| 20ನೇ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

Share This Article