2ನೇ ಬಾರಿ ಜೈಲು ಪಾಲಾದ ಚೈತ್ರಾ ಕುಂದಾಪುರ

Public TV
1 Min Read

ದೊಡ್ಮನೆ ಆಟ (Bigg Boss Kannada 11) ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದು 70ನೇ ದಿನದತ್ತ ಮುನ್ನುಗ್ಗುತ್ತಿದೆ. ಇದೀಗ ಈ ವಾರ ಕಳಪೆ ಪ್ರದರ್ಶನ ಅಂತ ಮನೆ ಮಂದಿ ಮತ್ತೆ ಚೈತ್ರಾರನ್ನು (Chaithra Kundapura) ಜೈಲಿಗೆ ಅಟ್ಟಿದ್ದಾರೆ. ಕೆಲವರ ಪಿತೂರಿಯಿಂದ ನನಗೆ ಕಳಪೆ ಸಿಕ್ಕಿದೆ ಅಂತ ಚೈತ್ರಾ ಕೂಗಾಡಿದ್ದಾರೆ. ಈ ಕುರಿತ ಪ್ರೋಮೋ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ:ಗುರುಪ್ರಸಾದ್‌ಗೆ ಕೋಟಿಗಟ್ಟಲೇ ಸಾಲ, ರಮ್ಮಿ ಗೀಳು, ಖಿನ್ನತೆ ಇತ್ತಾ?: ಪತ್ನಿ ಸುಮಿತ್ರಾ ಸ್ಪಷ್ಟನೆ

ಗೌತಮಿ, ಉಗ್ರಂ ಮಂಜು, ಚೈತ್ರಾ ಸೇರಿದಂತೆ ಅನೇಕರು ಚೈತ್ರಾ ಹೆಸರನ್ನು ಕಳಪೆಗೆ ಸೂಚಿಸಿದ್ದಾರೆ. ಇದು ಚೈತ್ರಾ ಸಿಟ್ಟಿಗೆ ಕಾರಣವಾಗಿದೆ. ನಾನು ಪ್ರದರ್ಶನ ಕೊಟ್ಟರೂ ಕೂಡ ಅದು ಹೇಗೆ ನೀವು ಕಳಪೆ ಎನ್ನುತ್ತೀರಿ ಎಂದು ಚೈತ್ರಾ ರೇಗಿದ್ದಾರೆ. ನೀವು ಜಾಸ್ತಿ ಮಾತನಾಡಿತ್ತೀರಿ, ವಾದ ವಿವಾದ ಮಾಡುತ್ತೀರಿ ಅದು ಸರಿ ಇಲ್ಲ. ಹಾಗಾಗಿ ಕಳಪೆ ಕೊಡುತ್ತೇನೆ ಎಂದು ಮಂಜು ನೇರವಾಗಿ ಚೈತ್ರಾ ಹೇಳಿದ್ದಾರೆ.

ಇದು ಎರಡನೇ ಬಾರಿ ಈ ಮನೆಯಲ್ಲಿ ಅವರು ಜೈಲು ಸೇರುತ್ತಿದ್ದಾರೆ. ಈ ಮೊದಲೂ ಸಹ ಒಮ್ಮೆ ಕಳಪೆ ಪಟ್ಟ ತೆಗೆದುಕೊಂಡು ಅವರು ಜೈಲು ಪಾಲಾಗಿದ್ದರು. ಡಿ.3ರಂದು ಚೈತ್ರಾ ಅವರು ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆಂದು ಬಿಗ್‌ಬಾಸ್‌ನಿಂದ ಹೊರಗೆ ಬಂದಿದ್ದರು. ಕಾಕತಾಳೀಯದಂತೆ ಅದೇ ವಾರದಲ್ಲಿ ಅವರು ಬಿಗ್ ಬಾಸ್ ಮನೆಯ ಜೈಲು ಸೇರಿದ್ದಾರೆ. ಆದರೆ ಈ ಬಾರಿ ಅವರಿಗೆ ಕಳಪೆ ಪಟ್ಟ ನೀಡಿರುವುದು ಚೈತ್ರಾ ಅವರಿಗೆ ಸುತಾರಾಂ ಹಿಡಿಸಿಲ್ಲ. ಉಗ್ರಂ ಮಂಜು ಹಾಗೂ ಕೆಲವರ ಪಿತೂರಿಯಿಂದಲೇ ತಮಗೆ ಕಳಪೆ ದೊರೆತಿದೆ ಎಂದು ಚೈತ್ರಾ ಆರೋಪಿಸಿದ್ದಾರೆ.

Share This Article