ವಿಜಯೇಂದ್ರ ಸಿಎಂ ಆಗ್ಬೇಕು ಅಂದ್ರೆ ಎಲ್ಲರ ಸಹಕಾರ ಬೇಕು: ರೇಣುಕಾಚಾರ್ಯ

By
1 Min Read

ರಾಯಚೂರು: ವಿಜಯೇಂದ್ರ (BY Vijayendra) ಮುಖ್ಯಮಂತ್ರಿ ಆಗಬೇಕು ಅಂದರೆ ಎಲ್ಲರ ಸಹಕಾರ ಬೇಕು. ಕಾಂಗ್ರೆಸ್‌ನವರ (Congress) ಒಳಜಗಳದಿಂದಾಗಿ ಯಾವುದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಬರಬಹುದು ಎಂದು ಮಾಜಿ ಸಚಿವ ರೇಣುಕಾಚಾರ್ಯ (MP enukacharya) ಹೇಳಿದ್ದಾರೆ.

ರಾಯಚೂರಿನ (Raichuru) ಲಿಂಗಸುಗೂರಿನಲ್ಲಿ (Lingasuguru) ನಡೆದ `ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ ಸಿಎಂ ಆಗಬೇಕಾ ಬೇಡ್ವಾ? ಅಧ್ಯಕ್ಷರಾಗಿ ಮುಂದುವರೆಯಬೇಕಾ ಬೇಡ್ವಾ? ಎಂದು ಜನರನ್ನ ಪ್ರಶ್ನಿಸಿದರು. ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಅಂದರೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಬದಲಾವಣೆ ತಂದಿವೆ – ಯಶವಂತರಾಯಗೌಡ ಪಾಟೀಲ್

ರಾಜ್ಯ ಸರ್ಕಾರ ಹಳ್ಳಿಗಳಿಗೆ ಬಸ್ ಬಿಟ್ಟಿಲ್ಲ ಹೆಣ್ಮಕ್ಕಳು ಹೇಗೆ ಓಡಾಡುತ್ತಾರೆ. ಸರ್ಕಾರವೇ ಟೇಕ್ ಆಫ್ ಆಗಿಲ್ಲ, ರಾಜ್ಯದ ಜನರಿಗೆ ಟೋಪಿ ಹಾಕಿದ್ದಾರೆ. ಅಯೋಗ್ಯ ಜಮೀರ್ ಅಹ್ಮದ್‌ಗೆ ತಕ್ಕ ಉತ್ತರ ಕೊಡಬೇಕು. ವಕ್ಫ್ ಬೋರ್ಡ್ ರದ್ದಾಗಲು ನೋಟಿಸ್ ಕೊಟ್ಟಿದ್ದೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಉತ್ತರ ಕೊಡಲು ಹೋರಾಟ ಸಮಾವೇಶ ಮಾಡುತ್ತಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮುಡಾ ಹಗರಣದಲ್ಲಿ (MUDA Scam) ಸಿಲುಕಿದ್ದಾರೆ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ, ಮುಡಾ ಹಗರದಲ್ಲಿ ಸಿಲುಕಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.

ಹಾಸನದಲ್ಲಿ ಡಿಕೆಶಿ ಇಡೀ ಸಮಾವೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ತಾನೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನೂ ಪರಮೇಶ್ವರ್ ಸೈಲೆಂಟ್ ಕಿಲ್ಲರ್. ಹಾಸನದಲ್ಲಿ ನಡೆಯುತ್ತಿರುವುದು ಕಲ್ಯಾಣ ಸಮಾವೇಶ ಅಲ್ಲ. ಹೊಡೆದಾಟ ಸಮಾವೇಶ ಎಂದು ಹೇಳಿದರು.ಇದನ್ನೂ ಓದಿ: ಮತ್ತೆ ಕುಂಕುಮ ಇಟ್ಟುಕೊಳ್ಳಲು ನಿರಾಕರಿಸಿದ ಸಿಎಂ!

Share This Article