ಹೆಂಡತಿಗೆ ಮಂಗಳಸೂತ್ರ ಕೊಡಿಸಲು ATMಗೆ ಕನ್ನ – ಆರೋಪಿ ಬಂಧನ

Public TV
1 Min Read

ಬೆಳಗಾವಿ: ಹೆಂಡತಿಗೆ ಮಂಗಳಸೂತ್ರ ಕೊಡಿಸಲು ಎಟಿಎಂಗೆ ಕನ್ನ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ನಗರದ ಕೃಷ್ಣಾ ಸುರೇಶ್ ದೇಸಾಯಿ ಬಂಧಿತ ಆರೋಪಿ. ಈತ ಹೆಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂನಲ್ಲಿ ಹಣ ಎಗರಿಸಿದ್ದ. ಎಂಟು ಲಕ್ಷ ಹಣ ಕಳ್ಳತನ ಮಾಡಿದ್ದ. ಇದನ್ನೂ ಓದಿ: ತಿರುವಣ್ಣಾಮಲೈನಲ್ಲಿ ಭೂಕುಸಿತಕ್ಕೆ 7 ಮಂದಿ ಬಲಿ – ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ

ಕೃಷ್ಣಾ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ‌. ಎಟಿಎಂ ಮಷಿನ್ ಕೀ ತನ್ನ ಬಳಿಯೇ ಇರ್ತಿತ್ತು. ಟೀಂ ಜೊತೆಗೆ ಬಂದು ಹಣ ಹಾಕಿ ಬಳಿಕ ಸಂಜೆ ಒಬ್ಬನೇ ಬಂದು ಕಳ್ಳತನ ಮಾಡಿದ್ದಾನೆ.

ಹಣ ಹಾಕಲು ಇರುತ್ತಿದ್ದ ಎಟಿಎಂ ಮಷಿನ್ ಕೀ ಬಳಸಿಯೇ ಎಂಟು ಲಕ್ಷ ಹಣ ಕಳ್ಳತನ ಮಾಡಿದ್ದಾನೆ. ಎರಡು ದಿನದ ಬಳಿಕ ಈತನ ಕೃತ್ಯ ಬೆಳಕಿಗೆ ಬಂದಿತ್ತು. ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಎಟಿಎಂನಿಂದ ತಮ್ಮ‌ ಸಿಬ್ಬಂದಿ ಹಣ ಕದ್ದಿದ್ದು ಕಂಡು ಇತರರು ಶಾಕ್‌ ಆಗಿದ್ದರು. ಇದನ್ನೂ ಓದಿ: ಆಸ್ತಿಗಾಗಿ ಸುಪಾರಿ ಕೊಟ್ಟು ತಮ್ಮನನ್ನೇ ಮುಗಿಸಿದ ಅಣ್ಣ – ಐವರು ಜೈಲು ಪಾಲು!

ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ ಒಂದು ಮಂಗಳಸೂತ್ರ, ಚಿನ್ನದ ಸರ, ಏಳು ಲಕ್ಷ ರೂ. ‌ನಗದು ಜಪ್ತಿ ಮಾಡಲಾಗಿದೆ.

Share This Article