ಕರ್ನಾಟಕ, ಕೇರಳದತ್ತ ಫೆಂಗಾಲ್ ಸೈಕ್ಲೋನ್- ಕೊಡಗಿಗೆ ರೆಡ್‌, ಯಾವ ಜಿಲ್ಲೆಗಳಿಗೆ ಯಾವ ಅಲರ್ಟ್‌?

Public TV
1 Min Read

ಬೆಂಗಳೂರು: ಫೆಂಗಲ್ ಚಂಡಮಾರುತ (Fengal Cyclone) ಎಫೆಕ್ಟ್ ಕರುನಾಡಿಗೂ (Karnataka) ತಟ್ಟಿದೆ. ಮೊನ್ನೆಯಿಂದ ಸುರಿಯುತ್ತಿರುವ ಜಡಿ ಮಳೆ (Heavy Rain), ಮೈಕೋರೆವ ಚಳಿಗೆ ಜನ ಹೈರಾಣಾಗಿದ್ದಾರೆ.

ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿತಿರುವ ಸೋನೆ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಭಾನುವಾರ ಮತ್ತು ಇಂದು ಬೆಂಗಳೂರಿನ ಉಷ್ಣಾಂಶದಲ್ಲಿ ದಾಖಲೆಯ ಇಳಿಕೆಯಾಗಿದೆ. ಬುಧವಾರದ ಬಳಿಕ ಬೆಂಗಳೂರು (Bengaluru) ಸಹಜ ಸ್ಥಿತಿಗೆ ಬರುವ ಸುಳಿವನ್ನು ಹವಾಮಾನ ಇಲಾಖೆ ನೀಡಿದೆ.

 

ಈ ತಿಂಗಳಿಡಿ ಹಗಲಿನಲ್ಲಿಯೂ ಚಳಿ ಇರಲಿದೆ ಎಂದು ಹೇಳಲಾಗಿದೆ. ಬರೀ ಬೆಂಗಳೂರು ಮಾತ್ರವಲ್ಲ ಫೆಂಗಲ್ ಪರಿಣಾಮದಿಂದ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಆಗುತ್ತಿದೆ. ಕೊಡಗಿನ ಜೊತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ಚಿಕ್ಕಬಳ್ಳಾಪುರ | ಫೆಂಗಲ್‌ ಚಂಡಮಾರುತಕ್ಕೆ ರಾಗಿ ಬೆಳೆ ನಾಶ – ಹೂದೋಟವೂ ಹಾಳು

ಫೆಂಗಲ್ ಪರಿಣಾಮ ಕಟಾವಿಗೆ ಬಂದ ಬೆಳೆಗಳು ನೆಲಕಚ್ಚುವ ಆತಂಕ ರೈತರನ್ನು ಆವರಿಸಿದೆ. ಚಾಮರಾಜನಗರದಲ್ಲಿಯೂ ಮನೆಯೊಂದು ಕುಸಿದಿದೆ. ತಮಿಳುನಾಡು ಕಡೆಯಿಂದ ನೀರು ಬರ್ತಿರುವ ಕಾರಣ ಹಳ್ಳ ಕೊಳ್ಳಗಳು ಭರ್ತಿಯಾಗಿವೆ.

 

ಯಾವ ಜಿಲ್ಲೆಗಳಿಗೆ ಏನು ಅಲರ್ಟ್‌?
ರೆಡ್ ಅಲರ್ಟ್ – ಕೊಡಗು
ಆರೆಂಜ್ ಅಲರ್ಟ್‌ – ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ರಾಮನಗರ
ಯೆಲ್ಲೋ ಅಲರ್ಟ್‌ – ಮಂಡ್ಯ, ಹಾಸನ

Share This Article