ಚಿಕ್ಕಬಳ್ಳಾಪುರ | ಫೆಂಗಲ್‌ ಚಂಡಮಾರುತಕ್ಕೆ ರಾಗಿ ಬೆಳೆ ನಾಶ – ಹೂದೋಟವೂ ಹಾಳು

Public TV
1 Min Read

– ಜಿಲ್ಲಾಧಿಕಾರಿ ಮನೆ ಬಳಿಯೇ ಧರೆಗುರುಳಿದ ಮರ

ಚಿಕ್ಕಬಳ್ಳಾಪುರ: ಫೆಂಗಲ್ ಚಂಡಮಾರುತದ ಬಿಸಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗೂ ತಟ್ಟಿದೆ. ಸೈಕ್ಲೋನ್ ಪರಿಣಾಮದಿಂದ ಚಿಕ್ಕಬಳ್ಳಾಪುರದಲ್ಲಿ ತರಹೇವಾರಿ ಹೂವು ಹಾಗೂ ತರಕಾರಿ, ರಾಗಿ ಬೆಳೆಗಳು (Millet Crop) ಹಾನಿಯಾಗಿವೆ.

ಜಿಲ್ಲೆಯಲ್ಲಿ ತರಹೇವಾರಿ ಸೇವಂತಿಗೆ, ಗುಲಾಬಿ, ಚೆಂಡು ಹೂ, ಕನಕಾಂಬರ, ಸೇರಿದಂತೆ ವಿವಿಧ ರೀತಿಯ ಹೂವುಗಳನ್ನ ಬೆಳೆಯಲಾಗುತ್ತದೆ. ಆದ್ರೆ ಕಳೆದ 2 ದಿನಗಳಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಹೋದೋಟಗಳೆಲ್ಲವೂ ಮಳೆ ನೀರಿನಿಂದ ಆವೃತವಾಗಿ ಬೆಳೆ ಕೊಳೆಯುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ವಿಧಾನಸೌಧಕ್ಕೆ ತಲುಪಿದ ಇಡಿ ತನಿಖೆ – ಬೈರತಿ ಸುರೇಶ್‌ ಕಚೇರಿ ಸಿಬ್ಬಂದಿಗೆ ಇಡಿ ನೋಟಿಸ್‌

ಇತ್ತ ತೇವಾಂಶದಿಂದ ಹೂವನ್ನ ಪಾರ್ಸೆಲ್‌ ಕೊಂಡೊಯ್ಯಲಾಗುವುದಿಲ್ಲ ಅಂತ, ಜನ ಖರೀದಿಗೂ ಮುಂದಾಗುತ್ತಿಲ್ಲ. ಇದ್ರಿಂದ ಹೂ ಬೆಳೆದ ರೈತರು ನಷ್ಟಕ್ಕೀಡಾಗಿದ್ದಾರೆ. ಇನ್ನೂ ಕಟಾವಿಗೆ ಬಂದಿದ್ದ ರಾಗಿ ಬೆಳೆ ಸಹ ಮಳೆಯಿಂದ ಒದ್ದೆಯಾಗಿ ನಾಶವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ತುಮಕೂರಿಗೆ ಮೆಟ್ರೋ ರೈಲು‌ ಸೇವೆ ಕಲ್ಪಿಸಲು ಡಿಪಿಆರ್ ಪರಿಶೀಲನೆ ನಡೀತಿದೆ: ಪರಮೇಶ್ವರ್‌

ಜಿಲ್ಲಾಧಿಕಾರಿ ಮನೆ ಬಳಿಯೇ ಧರೆಗುರುಳಿದ ಮರ:
ಇನ್ನೂ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಜಡಿ ಮಳೆಯಾಗುತ್ತಿದೆ. ನಗರದಿಂದ ಮೂಷ್ಟೂರು ಮಾರ್ಗದ ರಸ್ತೆಯಲ್ಲಿರುವ ಡಿಸಿ ರವೀಂದ್ರ ನಿವಾಸದ ರಸ್ತೆಯಲ್ಲೇ ಬೃಹತ್ ಮರವೊಂದು ಧರೆಗುರುಳಿದೆ. ಸದಾ ಸಂಚಾರದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆ ಇಂದು ಖಾಲಿಯಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನುತ್ತಾರೆ ಸ್ಥಳೀಯರು. ಅಲ್ಲದೇ ಇದೇ ರಸ್ತೆಯಲ್ಲಿ ಇನ್ನಷ್ಟು ಮರಗಳು ಬೀಳುವ ಹಂತದಲ್ಲಿದ್ದು, ಅವುಗಳನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಕ್ಯಾನ್ಸರ್ ಇದೆ, ಈಗ ವಿಚಾರಣೆಗೆ ಬರಲು ಸಾಧ್ಯವಿಲ್ಲ – ಪೊಲೀಸರಿಗೆ ಚಂದ್ರಶೇಖರ ಶ್ರೀ ಪತ್ರ

Share This Article