ಮದುವೆ ಸಂಭ್ರಮದಲ್ಲಿ ನಾಗಚೈತನ್ಯ, ಶೋಭಿತಾ- ವಿವಾಹಪೂರ್ವ ಶಾಸ್ತ್ರಗಳು ಶುರು

Public TV
1 Min Read

ಟಾಲಿವುಡ್ ನಟ ನಾಗಚೈತನ್ಯ, ಶೋಭಿತಾ (Sobhita Dhulipala) ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ (Nagachaitanya) ಮತ್ತು ಶೋಭಿತಾರವರ ವಿವಾಹಪೂರ್ವ ಶಾಸ್ತ್ರಗಳು ಜರುಗಿವೆ. ಇಬ್ಬರೂ ಖುಷಿ ಖುಷಿಯಾಗಿ ಭಾಗಿಯಾಗಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.

ಮದುವೆ ಕಾರ್ಯಕ್ರಮದ ಆರಂಭದ ಭಾಗವಾಗಿ ನಾಗಚೈತನ್ಯ ಹಾಗೂ ಶೋಭಿತಾ ಅರಿಶಿಣ ಕುಂಕುಮ ನೀರಿನಲ್ಲಿ ಪವಿತ್ರವಾದ ಮಂಗಳಸ್ನಾನ ಮಾಡಿದ್ದಾರೆ. ಜೊತೆಗೆ ಹಳದಿ ಶಾಸ್ತ್ರ ಕೂಡ ನೆರವೇರಿದೆ. ಶಾಸ್ತ್ರದ ವೇಳೆ, ಇಬ್ಬರೂ ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ:ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

ಇದೇ ಡಿ.4ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ಜರುಗಲಿದೆ. ಈ ಮದುವೆಗೆ ತೆಲುಗು ಖ್ಯಾತ ನಟ, ನಟಿಯರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.

ಅಂದಹಾಗೆ, ಈ ಹಿಂದೆ ಸಮಂತಾ (Samantha) ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕಾರಣಾಂತರಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು. ಈಗ ಶೋಭಿತಾ ಜೊತೆ 2ನೇ ಮದುವೆಗೆ ನಟ ಸಜ್ಜಾಗಿದ್ದಾರೆ.

Share This Article