ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ: ಸಿದ್ದರಾಮಯ್ಯ

Public TV
2 Min Read

– ಬೇರೆ ಧರ್ಮವನ್ನು ಸಹಿಸೋ ಸಹಿಷ್ಣುತೆ ಇರಬೇಕು

ಬಳ್ಳಾರಿ: ಒಬ್ಬರು ಮತ್ತೊಬ್ಬರನ್ನು ದಯೇ ಕರುಣೆ ವಾತ್ಸಲ್ಯದಿಂದ ನೋಡಬೇಕು. ದ್ವೇಷ ಅಸೂಯೆ ಇದ್ದರೆ ಸಮಾಜದಲ್ಲಿ ಒಡುಕು ಉಂಟಾಗಿ ವಿಭಜನೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕ್ರೈಸ್ತ ಧರ್ಮಕ್ಷೇತ್ರ ಅಮೃತೋತ್ಸವ ಹಿನ್ನೆಲೆಯಲ್ಲಿ ಬಳ್ಳಾರಿ ಆರೋಗ್ಯಮಾತೆ ಪುಣ್ಯಕ್ಷೇತ್ರದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನದಲ್ಲಿ ನಿಮ್ಮ ಧರ್ಮ ಪಾಲನೆ ಮಾಡಿ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದಿದ್ದಾರೆ. ಬೇರೆ ಧರ್ಮವನ್ನು ಸಹಿಸುವ ಸಹಿಷ್ಣುತೆ ಇರಬೇಕು. ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ. ಎಲ್ಲರನ್ನೂ ಗೌರವಿಸಿದರೆ ಅಂಬೇಡ್ಕರ್, ಸಂವಿಧಾನ ಮತ್ತು ಧರ್ಮ ಗುರುಗಳಿಗೆ ಗೌರವ ನೀಡಿದಂತೆ ಎಂದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಮುಂದುವರಿದ ಸರಣಿ ಸಾವು – ಬಿಮ್ಸ್‌ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು

ಸಿಎಂ ಸಿದ್ದರಾಮಯ್ಯ ಕುವೆಂಪು ಅವರ ನಾಡ ಗೀತೆ ಸಾಲು ಹಾಡುವ ಮೂಲಕ ಧರ್ಮದ ಬಗ್ಗೆ ಸಮಗ್ರವಾಗಿ ಮಾತನಾಡಿದರು. ಸಿದ್ದರಾಮಯ್ಯ ಮುಸ್ಲಿಂ ಒಲೈಸುತ್ತಾರೆ ಎಂದು ಹೇಳುತ್ತಾರೆ ಹಿಂದೂಗಳನ್ನು ವಿರೋಧಿ ಮಾಡುತ್ತಾರೆ ಎನ್ನುತ್ತಾರೆ. ಆದರೆ ನಾನು ಹಿಂದೂ ಮುಸ್ಲಿಂ, ಕ್ರೈಸ್ತ ಎಲ್ಲರನ್ನೂ ಪ್ರೀತಿಸುತ್ತೇನೆ ಎಂದು ತಿಳಿಸಿದರು.

ಭಾರತ ದೇಶ ಬಹುತ್ವದ ದೇಶವಾಗಿದೆ. ಎಲ್ಲಾ ಧರ್ಮ ಜಾತಿ ಧರ್ಮ, ಭಾಷೆಯವರು ಇದ್ದಾರೆ. ಮೂಲತಃ ನಾವೆಲ್ಲ ಮಾನವರು. ಸರ್ವಧರ್ಮ ಸಮನ್ವಯ ದೇಶದಲ್ಲಿ ಮಾತ್ರ ಇದೆ ಇದು ನಮ್ಮ ಪರಂಪರೆ ಇದನ್ನು ಉಳಿಸುವ ಬೆಳೆಸಬೇಕಿದೆ. ಹುಟ್ಟುವಾಗ ವಿಶ್ವ ಮಾನವರಾಗಿ ಹುಟ್ಟುತ್ತೇವೆ. ಬೆಳೆಯುತ್ತಾ ಅಲ್ಪ ಮಾನವರಾಗುತ್ತೇವೆಂದು ಕುವೆಂಪು ಹೇಳಿದ್ದಾರೆ. ವಿಶ್ವಮಾನವರಾಗಬೇಕು ಅಲ್ಪ ಮಾನವರಾಗಬಾರದು. ಪರಸ್ಪರ ಪ್ರೀತಿಯಿಂದ ಇರಬೇಕು. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಲ್ಲ. ಹಿಂದೂ, ಕೈಸ್ತ, ಮುಸ್ಲಿಂ ಯಾವ ಧರ್ಮ ದ್ವೇಷ ಬಿತ್ತಲ್ಲ ಬೋಧನೆ ಮಾಡಲ್ಲ. ಹೀಗಾಗಿ ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ ಎಂದು ಹೇಳಿದರು.

 

Share This Article