ದಿನ ಭವಿಷ್ಯ 25-11-2024

Public TV
1 Min Read

ವಾರ: ಸೋಮವಾರ, ತಿಥಿ: ದಶಮಿ
ನಕ್ಷತ್ರ: ಉತ್ತರ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ
ರಾಹುಕಾಲ: 7.51 ರಿಂದ 9.17
ಗುಳಿಕಕಾಲ: 1.36 ರಿಂದ 3.02
ಯಮಗಂಡಕಾಲ: 10.43 ರಿಂದ 12.09

ಮೇಷ: ಸ್ನೇಹಿತರಿಂದ ಸಹಾಯ, ಹಣಕಾಸಿನ ವಿಚಾರದಲ್ಲಿ ಎಚ್ಚರ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿ ಖರೀದಿ.

ವೃಷಭ: ಮಹಿಳೆಯರಿಗೆ ಶುಭ ಸಮಯ, ಸಾಲಗಳಿಂದ ದೂರವಿರಿ, ಕೆಲಸದ ಒತ್ತಡ, ಆರೋಗ್ಯದಲ್ಲಿ ಏರುಪೇರು.

ಮಿಥುನ: ಶ್ರಮಕ್ಕೆ ತಕ್ಕ ಫಲ, ಧರ್ಮಕಾರ್ಯದಿಂದ ಮನಶಾಂತಿ, ಸುಖ ಭೋಜನ, ಹಿತ ಶತ್ರುಗಳಿಂದ ತೊಂದರೆ.

ಕಟಕ: ಗುರು ಹಿರಿಯರ ಭೇಟಿ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ, ಆದಾಯ ಕಡಿಮೆ ಅಧಿಕ ಖರ್ಚು.

ಸಿಂಹ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಧನ ನಷ್ಟ, ನಂಬಿಕಸ್ತರಿಂದ ಮೋಸ.

ಕನ್ಯಾ: ಪರರಿಂದ ಸಹಾಯ, ಮನಸ್ಸಿನಲ್ಲಿ ಗೊಂದಲ, ವಿದೇಶ ಪ್ರಯಾಣ, ತೀರ್ಥಯಾತ್ರೆ, ಉದ್ಯೋಗದಲ್ಲಿ ಬಡ್ತಿ.

ತುಲಾ: ಸಲ್ಲದ ಅಪವಾದ ನಿಂದನೆ, ಅಲ್ಪ ಕಾರ್ಯಸಿದ್ದಿ, ನಾನಾ ರೀತಿಯ ತೊಂದರೆ, ಅನಗತ್ಯ ತಿರುಗಾಟ.

ವೃಶ್ಚಿಕ: ಸ್ತ್ರೀ ಸೌಖ್ಯ, ಅವಿವಾಹಿತರಿಗೆ ವಿವಾಹ ಯೋಗ, ಕೃಷಿಕರಿಗೆ ಲಾಭ, ಬಾಕಿ ಹಣ ಕೈ ಸೇರುವುದು, ವಿಪರೀತ ವ್ಯಸನ.

ಧನಸ್ಸು: ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ಜಯ, ಸ್ಥಳ ಬದಲಾವಣೆ, ವಿವಾಹ ಯೋಗ.

ಮಕರ: ನೀಚ ಜನರಿಂದ ದೂರವಿರಿ, ದ್ರವ್ಯ ಲಾಭ, ಬಂಧುಗಳಲ್ಲಿ ಮನಸ್ತಾಪ, ಆರೋಗ್ಯ ಪ್ರಾಪ್ತಿ, ಹಿರಿಯರಿಂದ ಬೋಧನೆ.

ಕುಂಭ: ಪ್ರಿಯ ಜನರ ಭೇಟಿ, ಯತ್ನ ಕಾರ್ಯ ಅನುಕೂಲ, ಋಣ ಭಾದೆಯಿಂದ ಮುಕ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ.

ಮೀನ: ಇಷ್ಟಾರ್ಥ ಸಿದ್ದಿ, ನೆಮ್ಮದಿ ಇಲ್ಲದ ಜೀವನ, ಅಧಿಕ ಕೋಪ, ಮಕ್ಕಳಿಂದ ಸಹಾಯ, ಮಾತಿನಲ್ಲಿ ಹಿಡಿತವಿರಲಿ.

Share This Article