ಬೆಂಗಳೂರು| ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ತಾಯಿ – ತಾನೂ ಆತ್ಮಹತ್ಯೆಗೆ ಯತ್ನ

Public TV
1 Min Read

ಬೆಂಗಳೂರು: ಹೆತ್ತ ಮಕ್ಕಳಿಬ್ಬರನ್ನು ತಾಯಿಯೇ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಕ್ಕಳನ್ನ ಕೊಲೆ ಮಾಡಿ ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಮಹಿಳೆ ಯತ್ನಿಸಿದ್ದಾರೆ.

ಸುಭಂ (7), ಸಿಯಾ (3) ಕೊಲೆಯಾಗಿರುವ ದುರ್ದೈವಿ ಮಕ್ಕಳು. ಮಹಿಳೆ ಮೊದಲು ಟೈನ್ ದಾರದಿಂದ ಕತ್ತು ಹಿಸುಕಿ ಮಕ್ಕಳಿಬ್ಬರ ಕೊಲೆ ಮಾಡಿದ್ದಾಳೆ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಂಡನೊಂದಿಗೆ ಜಗಳ ಮಾಡಿಕೊಂಡು ಮಕ್ಕಳನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಮಾತನಾಡಿ, ನಿನ್ನೆ ರಾತ್ರಿ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಉಸಿರುಗಟ್ಟಿಸಿ ಸಾವು ಆಗಿರೋದು ಗೊತ್ತಾಗಿದೆ. ತಾಯಿ ಕೊಲೆ ಮಾಡಿರುವ ಶಂಕೆಯಲ್ಲಿ ತನಿಖೆಯನ್ನ ಮಾಡಲಾಗ್ತಿದೆ. ಸದ್ಯ ಮಕ್ಕಳ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ನಮ್ಮಿಬ್ಬರ ನಡುವೆ ಜಗಳ ನಡೀತಿದೆ. ಅದಕ್ಕಾಗಿ ಗಂಡ ಕೊಲೆ ಮಾಡಿರುವುದಾಗಿ’ ಪತ್ನಿ ಆರೋಪ ಮಾಡಿದ್ದಾಳೆ.

ಗಂಡ ಹೆಂಡತಿ ನಡುವೆ ಮನಸ್ತಾಪ ಇದೆ. ಆಗಾಗ ಅವರಿಬ್ಬರ ನಡುವೆ ಜಗಳ ನಡೀತಿದೆ. ಇದೆ ಕಾರಣಕ್ಕೆ ಪತ್ನಿ ಮೇಲೆ ಗಂಡ ಹಾಗೂ ಗಂಡನ ಮೇಲೆ ಪತ್ನಿ ಆರೋಪ ಮಾಡ್ತಿದ್ದಾರೆ. ಮೃತ ಮಕ್ಕಳ ತಂದೆ ಆಟೋ ಓಡಿಸ್ತಾರೆ. ಪತ್ನಿ ಹೌಸ್ ವೈಫ್.

Share This Article