ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ; ರೆಸಾರ್ಟ್ ಸೀಲ್‌ಡೌನ್, ಮಾಲೀಕ ವಶಕ್ಕೆ

Public TV
2 Min Read

– 4-5 ನಿಮಿಷಗಳಲ್ಲೇ ಹೋಯ್ತು ಮೂರು ಜೀವ

ಮಂಗಳೂರು: ಇಲ್ಲಿನ ಹೊರವಲಯದ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್‌ನ (Uchila Beach Resort) ಈಜುಕೊಳದಲ್ಲಿ ಮೂವರು ಯುವತಿಯರು ಮುಳುಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಸಾರ್ಟ್ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ರೆಸಾರ್ಟ್‌ನಲ್ಲಿ ನಿಯಮ (Resort Rules) ಪಾಲನೆ ಮಾಡದಿರುವುದೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ತನಿಖೆ ಮುಗಿಯುವವರೆಗೆ ರೆಸಾರ್ಟ್‌ಅನ್ನು ಸೀಲ್‌ಡೌನ್ ಮಾಡಿದ್ದಾರೆ.

ಆ ಬೀಚ್ ರೆಸಾರ್ಟ್‌ನಲ್ಲಿ ನಡೆದಿದ್ದೇನು?
ಇಲ್ಲಿನ ಹೊರವಲಯದ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್ನ ಈಜುಕೊಳದಲ್ಲಿ (Swimming Pool) ಮೂವರು ಯುವತಿಯರು ಮುಳುಗಿ ಸಾವನ್ನಪ್ಪಿದ್ದಾರೆ. ಮೈಸೂರು ಮೂಲದ ಇಂಜಿನಿಯರಿಂಗ್ ಅಂತಿಮ ವರ್ಷ ಓದ್ತಿದ್ದ ನಿಶಿತಾ, ಪಾರ್ವತಿ, ಕೀರ್ತನಾ ನಿನ್ನೆ ರೆಸಾರ್ಟ್‌ಗೆ ಹೋಗಿದ್ದರು. ಇದನ್ನೂ ಓದಿ: Mangaluru| ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ದುರ್ಮರಣ

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ವಿಮಿಂಗ್‌ಪೂಲ್‌ಗೆ ಇಳಿದಿದ್ದಾರೆ. ಈಜು ಬಾರದಿದ್ದರೂ ಮೊದಲಿಗೆ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು, ಕೈಕೈ ಹಿಡಿದು ಆಟವಾಡುತ್ತಾ ಮುಂದೆ ಹೋಗಿದ್ದಾರೆ. ಅದರಲ್ಲಿ ಓರ್ವ ಯುವತಿ ಸ್ವಿಮಿಂಗ್‌ಪೂಲ್‌ನಲ್ಲಿದ್ದ ಟ್ಯೂಬ್ ಎತ್ತಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಈಜುಕೊಳ ಆಳ ಇದ್ದ ಕಾರಣ ಮುಳುಗಲು ಯತ್ನಿಸಿದ್ದಾಳೆ. ಆಕೆಯನ್ನು ಮತ್ತೋರ್ವ ಯುವತಿ ರಕ್ಷಿಸಲು ಮುಂದಾಗಿದ್ದಾಳೆ. ಈ ವೇಳೆ, ಇಬ್ಬರೂ ನೀರಿನಲ್ಲಿ ಮುಳುಗಿ ಒದ್ದಾಡಿದ್ದಾರೆ.

ಆಗ ಮೂರನೇ ಯುವತಿ ರಕ್ಷಣೆಗೆ ಹೋದಾಗ.. ಒಬ್ಬರನ್ನೊಬ್ಬರು ಹಿಡಿದುಕೊಂಡಿದ್ದಾರೆ. ಅಷ್ಟರಲ್ಲಿ ಓರ್ವ ಯುವತಿ ಭೀತಿಯಿಂದ ಏದುಸಿರು ಬಿಡುತ್ತಾ ಮುಳುಗಿದ್ದಾಳೆ. ಮತ್ತೋರ್ವಳು ನೀರು ಕುಡಿದಿದ್ದಾಳೆ. ಯುವತಿಯರು ಬೊಬ್ಬೆ ಹೊಡೆದು ಕೂಗಾಡಿದ್ರೂ ಯಾರು ಸ್ಪಂದಿಸಿಲ್ಲ. ನೋಡ ನೋಡ್ತಿದ್ದಂತೆಯೇ ಕೇವಲ ನಾಲ್ಕೈದು ನಿಮಿಷಗಳಲ್ಲೇ ಜಲಸಮಾಧಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಯಂತೆಯೇ ಮಂಗಳೂರು ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದನ್ನೂ ಓದಿ: ಸರ್ಕಾರಿ ನೌಕರರ ಬಿಪಿಎಲ್‌ ಕಾರ್ಡ್‌ ರದ್ದು – ಕಲಬುರಗಿಯಲ್ಲಿ ಹೆಚ್ಚು, ಉಡುಪಿಯಲ್ಲಿ ಅತಿ ಕಡಿಮೆ

ಪ್ರಾಥಮಿಕ ತನಿಖೆಯಲ್ಲಿ ರೆಸಾರ್ಟ್‌ನ ಈಜುಕೊಳದಲ್ಲಿ ನಿಯಮ ಪಾಲಿಸದಿರುವುದು ತಿಳಿದುಬಂದಿದ್ದು ರೆಸಾರ್ಟ್ ಮಾಲೀಕ ಮನೋಹರ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೆಸಾರ್ಟ್ ತಾತ್ಕಾಲಿಕವಾಗಿ ಸೀಲ್ ಮಾಡಿದ್ದಾರೆ. ಇನ್ನೂ, ಮೈಸೂರು ಕುರುಬಾರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ಎಂ.ಡಿ. ನಿಶಿತ (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಎಸ್. ಪಾರ್ವತಿ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಎನ್. ಕೀರ್ತನಾ (21) ಮೃತರಾಗಿದ್ದು ಪೋಷಕರು ಕಣ್ಣೀರಾಕುತ್ತಾ ಮಂಗಳೂರಿಗೆ ತೆರಳಿದ್ದಾರೆ. ಇದನ್ನೂ ಓದಿ: ಜಯನಗರ ಅನುದಾನ ಜಟಾಪಟಿ – ತಕ್ಷಣವೇ 10 ಕೋಟಿ ಬಿಡುಗಡೆಗೆ ಶಾಸಕ ರಾಮಮೂರ್ತಿ ಒತ್ತಾಯ

Share This Article