BBK 11: ಹನುಮಂತನ ಪ್ರಪೋಸ್‌ಗೆ ನಾಚಿ ನೀರಾದ ಚಾರು

Public TV
1 Min Read

ದೊಡ್ಮನೆಗೆ ವಿಶೇಷ ಅತಿಥಿಗಳ ಎಂಟ್ರಿಯಾಗಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ರಾಮಚಾರಿ’ (Ramachari) ಖ್ಯಾತಿಯ ಜೋಡಿ ರಿತ್ವಿಕ್ ಕೃಪಾಕರ್ (Rithvik Krupakar) ಮತ್ತು ಚಾರು ಅಲಿಯಾಸ್ ಮೌನ ಗುಡ್ಡೆಮನೆ (Mouna Guddemane) ಬಿಗ್ ಬಾಸ್‌ಗೆ ಅತಿಥಿಗಳಾಗಿ ಭಾಗವಹಿಸಿ ಮನರಂಜನೆ ಡಬಲ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ

ಈ ಜೋಡಿ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ಸ್ಪರ್ಧಿಗಳು ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ನಂತರ ಆತ್ಮೀಯವಾಗಿ ಬರಮಾಡಿಕೊಂಡ ಸ್ಪರ್ಧಿಗಳು, ಬಿಗ್ ಬಾಸ್ ಮನೆಯನ್ನು ಪರಿಚಯಿಸಿದ್ದಾರೆ. ವಿಶೇಷ ಅಂದ್ರೆ ಮನೆಗೆ ಎಂಟ್ರಿ ಆಗ್ತಿದ್ದಂತೆ ‘ಬಿಗ್ ಬಾಸ್’ ಇಬ್ಬರಿಗೂ ಟಾಸ್ಕ್ ಒಂದನ್ನು ನೀಡಿದ್ದಾರೆ.

ಅದೇನೆಂದರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ತಾವಿಬ್ಬರು ಜೋಡಿಯಾಗಿ ಇರುವಂತೆ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಜೊತೆಯಾಗಿರಲು ಹಗ್ಗವನ್ನು ನೀಡಿದ್ದಾರೆ. ಸ್ಪರ್ಧಿಗಳಂತೆ ರಾಮಚಾರಿ ಮತ್ತು ಚಾರು ಕೂಡ ಹಗ್ಗವನ್ನು ಕಟ್ಟಿಕೊಂಡಿದ್ದಾರೆ.

ದೊಡ್ಮನೆಯಲ್ಲಿ ಮನರಂಜನೆ ನೀಡಲು ‘ರಾಮಾಚಾರಿ’ ಸೀರಿಯಲ್ (Ramachari) ಜೋಡಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದಾರೆ. ಬಿಗ್ ಬಾಸ್ ಶೇರ್ ಮಾಡಿರುವ ವಿಡಿಯೋದಲ್ಲಿ, ಚಾರು ಅವರು ಹನುಮಂತಗೆ ತಮ್ಮನ್ನು ಇಂಪ್ರೆಸ್ ಮಾಡುವಂತೆ ಗುಲಾಬಿ ಹೂ ನೀಡಿದ್ದಾರೆ. ಹನುಮಂತ ಅವರು ತಮ್ಮ ಶೈಲಿಯಲ್ಲಿ ಹಾಡನ್ನು ಹೇಳಿ, ಮಂಡಿಯೂರಿ ಚಾರುಗೆ ಇಂಪ್ರೆಸ್ ಮಾಡಲು ಪ್ರಯತ್ನಿಸಿದ್ದಾರೆ. ನನ್ನ ಕಣ್ಣು ನಿನ್ನ ಮೇಲೆ ಎಂದು ಹಾಡುತ್ತಾ ಗುಲಾಬಿ ಹೂ ಕೊಟ್ಟು ಮಂಡಿಯೂರಿ ಪ್ರಪ್ರೋಸ್ ಮಾಡಿದ್ದಾರೆ. ಹನುಮಂತನ ಪ್ರೇಮ ನಿವೇದನೆಗೆ ಚಾರು ನಾಚಿ ನೀರಾಗಿದ್ದಾರೆ. ಹನುಮಂತನ ನಡೆಗೆ ಸಹಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.

Share This Article