Haveri| ನೀರಿನ ತೊಟ್ಟಿಯಲ್ಲಿ ಮುಳುಗಿ ಬಾಲಕ ಸಾವು

Public TV
1 Min Read

ಹಾವೇರಿ: ನೀರಿನ ತೊಟ್ಟಿಯಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಹಾವೇರಿ (Haveri) ಜಿಲ್ಲೆ ರಟ್ಟೀಹಳ್ಳಿ (Rattihalli) ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಮೂರನೇ ತರಗತಿಯಲ್ಲಿ ಓದುತ್ತಿದ್ದ ಪ್ರಜ್ವಲ್ ವನಗೆರೆ (9) ಎಂದು ಗುರುತಿಸಲಾಗಿದೆ. ನಿನ್ನೆ ಶನಿವಾರ ಆಗಿದ್ದರಿಂದ ಶಾಲೆ ಬಿಟ್ಟ ನಂತರ ಬಾಲಕ ಆಡಲು ತೆರಳಿದ್ದ. ಆಡಲು ಹೋಗಿದ್ದ ಬಾಲಕ ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ – ಖತರ್ನಾಕ್ ಕಳ್ಳರ ಬಂಧನ

ಸಂಜೆಯಾದರೂ ಬಾಲಕ ಪ್ರಜ್ವಲ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತನ ಮನೆಯವರು ಹುಡುಕಾಟ ನಡೆಸಿದ್ದರು. ಆಗ ಪ್ರಜ್ವಲ್ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಬಾಲಕನ ಮೃತದೇಹವನ್ನು ನೀರಿನ ತೊಟ್ಟಿಯಿಂದ ಮೇಲಕ್ಕೆತ್ತಿ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ. ಇದನ್ನೂ ಓದಿ: ಮುಡಾದಲ್ಲಿ ಸಿಎಂ ಪ್ರಭಾವಕ್ಕೆ ಮತ್ತೊಂದು ಸಾಕ್ಷಿ – ಸಿಎಂ ಪತ್ನಿ ಕ್ರಯಪತ್ರದ ಮುದ್ರಾಂಕ ಶುಲ್ಕ ತಹಶೀಲ್ದಾರ್‌ರಿಂದಲೇ ಪಾವತಿ

ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ: ಬೊಮ್ಮಾಯಿ

Share This Article