ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

Public TV
2 Min Read

– ಭಾರತ-ಪಾಕ್‌ ಇರೋದ್ರಿಂದಲೇ ಐಸಿಸಿ ಅಸ್ತಿತ್ವದಲ್ಲಿದೆ ಎಂದ ರಶೀದ್ ಲತೀಫ್

ಇಸ್ಲಾಮಾಬಾದ್‌: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ‌ (hampions trophy) ಪಾಲ್ಗೊಳ್ಳುವ ವಿಚಾರದಲ್ಲಿ ಭಾರತ-ಪಾಕಿಸ್ತಾನದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಈಗಾಗಲೇ ಪಾಕ್‌ಗೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಪಿಸಿಬಿ ಮಾತ್ರ ಬರಲೇಬೇಕೆಂದು ಪಟ್ಟು ಹಿಡಿದಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಮಹತ್ವದ ಹೇಳಿಕೆಯೊಂದನ್ನು ನೀಡಿದೆ.

ಪಾಕ್‌ ತಂಡದ ಮಾಜಿ ನಾಯಕ ರಶೀದ್ ಲತೀಫ್, ಭಾರತ ಈ ಬಾರಿ ಪಾಕಿಸ್ತಾನಕ್ಕೆ ಹೋಗದಿದ್ದರೆ, ಐಸಿಸಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ದೊಡ್ಡ ಹೆಜ್ಜೆಯನ್ನು ಪಿಸಿಬಿ ತೆಗೆದುಕೊಳ್ಳುತ್ತದೆ ಹೇಳಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

ಇದು ದ್ವಿಪಕ್ಷೀಯ ಸರಣಿ ಅಥವಾ ಏಷ್ಯಾ ಕಪ್ ಆಗಿದ್ದರೆ, ಭಾರತವು ಆಡಬೇಕೆ ಅಥವಾ ಬೇಡವೇ ಎಂದು ತಂಡಗಳನ್ನು ಕೇಳಬಹುದಿತ್ತು. ಇದು ದ್ವಿಪಕ್ಷೀಯ ಪಂದ್ಯವಾಗಿದ್ದರೆ, ಪಂದ್ಯವನ್ನು ರದ್ದು ಮಾಡಬಹುದಿತ್ತು. ಆದ್ರೆ ನೀವು ಈಗಾಗಲೇ ಸಹಿ ಮಾಡಿರುವುದರಿಂದ ಐಸಿಸಿ ಒಪ್ಪಂದಗಳನ್ನು ನಿರಾಕರಿಸಲಾಗುವುದಿಲ್ಲ. ಭಾರತವು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: WPL 2025 | 3ನೇ ಆವೃತ್ತಿಗೆ ಭರ್ಜರಿ ತಯಾರಿ – ರೀಟೆನ್‌ ಪಟ್ಟಿ ರಿಲೀಸ್‌

ಈಗಾಗಲೇ ಎಲ್ಲಾ ಪ್ರಸಾರಕರು ಮತ್ತು ಪ್ರಾಯೋಜಕರು 2024-31ರ ಅವಧಿಗೆ ಸಹಿ ಮಾಡಿದ್ದಾರೆ. ಭಾರತ ತಂಡ ಭಾಗವಹಿಸಲು ನಿರಾಕರಿಸಿದ್ರೆ ಬಲವಾದ ಕಾರಣ ಇರಬೇಕು. ಬಿಸಿಸಿಐ ಭದ್ರತೆಯ ಕಾರಣಗಳನ್ನು ನೀಡಿ ಟೂರ್ನಿ ನಿರಾಕರಿಸಲು ಮುಂದಾಗುತ್ತಿದೆ. ಹಾಗಾದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳು ಪಾಕಿಸ್ತಾನಕ್ಕೆ ಬರುತ್ತಿಲ್ಲವೇ? ಭಾರತವು ಪಾಕಿಸ್ತಾನಕ್ಕೆ ಹೋಗದಿದ್ದರೆ, ಪಾಕಿಸ್ತಾನವು ಐಸಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಮುಂದುವರಿದು ಪಾಕಿಸ್ತಾನ ಮತ್ತು ಭಾರತ ಇರುವುದರಿಂದಲೇ ಐಸಿಸಿ ಅಸ್ತಿತ್ವದಲ್ಲಿದೆ. ಭಾರತದಂತೆ ಪಾಕಿಸ್ತಾನ ಸರ್ಕಾರವೂ ನಾವು ಆಡುವುದಿಲ್ಲ ಎಂದು ಹೇಳಿದರೆ, ಯಾರೂ ಕೂಡ ಪಂದ್ಯವನ್ನು ವೀಕ್ಷಿಸುವುದಿಲ್ಲ. ಬಿಸಿಸಿಐನಿಂದಲೂ ಯಾವುದೇ ಪ್ರಯೋಜನ ಆಗೋದಿಲ್ಲ ಎಂದು ಕೆಣಕಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಹಾಲಿ ಚಾಂಪಿಯನ್ ಪಾಕಿಸ್ತಾನ ಸೇರಿದಂತೆ ತಲಾ 4 ತಂಡಗಳ ಎರಡು ಗುಂಪುಗಳನ್ನು ಒಳಗೊಂಡಿವೆ. ಈಗಾಗಲೇ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ನಿಗದಿಯಾಗಿದ್ದು, ಪಾಕಿಸ್ತಾನದ ಮುಲ್ತಾನ್‌, ರಾವಲ್ಪಿಂಡಿ ಹಾಗೂ ಲಾಹೋರ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲು ಸಜ್ಜಾಗಿವೆ.

ಬಿಸಿಸಿಐ ಷರತ್ತು ಏನು?
ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಜೊತೆಗೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಬೇಡಿಕೆಯಿಟ್ಟಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 6,6,6,6,6,W,6 – ಒಂದೇ ಓವರ್‌ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ!

Share This Article