ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತಷ್ಟು ಬಯಲು – 50:50 ಅನುಪಾತದ ದಾಖಲೆಗಳೇ ಮಾಯ?

Public TV
1 Min Read

– ಹಿಂದಿನ ಆಯುಕ್ತರು ದಾಖಲೆ ತೆಗೆದುಕೊಂಡು ಹೋಗಿರಬೇಕು ಅಥವಾ ಸುಟ್ಟು ಹಾಕಿರಬೇಕು ಎಂದ ಅಧಿಕಾರಿಗಳು
– 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಟೆನ್ಷನ್; ಮನೆ ಕಟ್ಟಲು ಸಿಗಲ್ಲ ಅನುಮತಿ

ಮೈಸೂರು: ಮುಡಾ (MUDA Case) ಬ್ರಹ್ಮಾಂಡ ಭ್ರಷ್ಟಾಚಾರ ಬಗೆದಷ್ಟು ಬಯಲಾಗುತ್ತಿದೆ. ಮುಡಾ 50:50 ಅನುಪಾತದ ದಾಖಲೆಗಳೇ ಮಾಯವಾಗಿವೆ. ಮುಡಾ ಸಭೆಯಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿರುವ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.

50:50 ಅನುಪಾತದ ‘ಸೆಲೆಕ್ಟಿವ್ ಸೈಟ್’ಗಳ ದಾಖಲೆಗಳೇ ಮಾಯವಾಗಿವೆ. ಮುಡಾ ಪ್ರಾಧಿಕಾರದ ಸದಸ್ಯರಿಗೆ ಅಧಿಕೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50:50 ಅನುಪಾತದ ಕೆಲವು ಸೆಲೆಕ್ಟಿವ್ ಸೈಟ್‌ಗಳ ಕಡತಗಳೇ ಇಲ್ಲ. ಹಿಂದಿನ ಆಯುಕ್ತರು ಅವುಗಳನ್ನು ತೆಗೆದುಕೊಂಡು ಹೋಗಿರಬೇಕು ಅಥವಾ ಸುಟ್ಟು ಹಾಕಿರಬೇಕು ಎಂದು ಪ್ರಾಧಿಕಾರದ ಜನಪ್ರತಿನಿಧಿ ಸದಸ್ಯರ ಮುಂದೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು| ವುಡ್‌ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ – ಕೋಟ್ಯಂತರ ಮೌಲ್ಯದ ವಸ್ತುಗಳು ಭಸ್ಮ

50:50 ಅನುಪಾತದಲ್ಲಿ ನಿರ್ದಿಷ್ಟವಾಗಿ ಇಂತಿಷ್ಟೆ ಸಂಖ್ಯೆ ಸೈಟ್ ಹಂಚಿಕೆ ಆಗಿವೆ ಎಂಬ ಬಗ್ಗೆ ಪ್ರಾಧಿಕಾರದ ಬಳಿ ಮಾಹಿತಿಯೇ ಇಲ್ಲ. ಕೆಲವು ಸೈಟ್‌ಗಳ ದಾಖಲೆ ಕೇಳಿದರೆ ಅವು ಕಳೆದು ಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳು ಹೇಳಿದ ಉತ್ತರ ಕೇಳಿ ಜನಪ್ರತನಿಧಿಗಳು ಬೆಚ್ಚಿದ್ದಾರೆ.

ಮತ್ತೊಂದು ಕಡೆ, 50:50 ಅನುಪಾತದ ಸೈಟ್ ಪಡೆದವರಿಗೆ ಟೆನ್ಷನ್ ಶುರುವಾಗಿದೆ. ಮನೆ ನಿರ್ಮಿಸಲು ಅನುಮತಿ ಸಿಗುವುದಿಲ್ಲ. ಮನೆ ಕಟ್ಟಲು ಆರಂಭ ಮಾಡಿದವರಿಗೂ ಅರ್ಧಕ್ಕೆ ನಿಲ್ಲಿಸಲು ಜಿಲ್ಲಾಡಳಿತ ಮುಂದಾಗಿದ್ದು, ಸದ್ಯದಲ್ಲೇ ಆದೇಶ ಹೊರಬೀಳಲಿದೆ. ಇದನ್ನೂ ಓದಿ: 5 ಗ್ಯಾರಂಟಿ ಕೊಡಿ ಅಂತ ಜನ ಕೇಳಿದ್ರಾ? – ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

Share This Article