ಚಾಮರಾಜನಗರ| ‘ಮಿಸ್ಟರ್‌ ಬಿಆರ್‌ಟಿ’ ಎಂದೇ ಹೆಸರಾಗಿದ್ದ ವಕ್ರದಂತ ಹೊಂದಿದ್ದ ಕಾಡಾನೆ ಸಾವು

Public TV
0 Min Read

ಚಾಮರಾಜನಗರ: ವಕ್ರದಂತ ಹೊಂದಿದ್ದ ಮಿಸ್ಟರ್‌ ಬಿಆರ್‌ಟಿ ಎಂದೇ ಹೆಸರಾಗಿದ್ದ ಕಾಡಾನೆ ಸಾವಿಗೀಡಾಗಿದೆ.

ಆಗಾಗ್ಗೆ ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಡಾನೆ ಕಾಣಿಸಿಕೊಳ್ಳುತ್ತಿತ್ತು. ಜನವಸತಿ ಪ್ರದೇಶದಲ್ಲಿ ಸಂಚಾರ ಮಾಡುತ್ತಿತ್ತು. ಅರಣ್ಯಾಧಿಕಾರಿಗಳು ಈ ಕಾಡಾನೆಯನ್ನು ಮತ್ತೊಂದೆಡೆಗೆ ಡ್ರೈವ್ ಮಾಡಿದ್ದರು.

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಡಾನೆ ಸಾವನ್ನಪ್ಪಿದೆ. ಯಳಂದೂರು ವನ್ಯಜೀವಿ ವಲಯದ ಕಡಿತಾಳಕಟ್ಟೆ ಗಸ್ತಿನ ವೀರನಕಾನು ಎಂಬಲ್ಲಿ ಕಾಡಾನೆ ಕಳೇಬರ ಸಿಕ್ಕಿದೆ. ವೈದ್ಯರು ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಸ್ವಾಭಾವಿಕ ಸಾವು ಎಂದು ಅಧಿಕಾರಿಗಳು ಖಾತ್ರಿ ಪಡಿಸಿಕೊಂಡಿದ್ದಾರೆ. ಅರಣ್ಯ ಸಿಬ್ಬಂದಿ ಮುಂದಿನ ಕ್ರಮ ವಹಿಸಿದ್ದಾರೆ.

Share This Article