ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’

Public TV
2 Min Read

– ಡಿ ಬಾಸ್.. ಜೈ ಡಿ ಬಾಸ್.. ಎಂದು ಕೂಗಿದ ಫ್ಯಾನ್ಸ್
– ಈಡುಗಾಯಿ ನೀವಳಿಸಿ ದರ್ಶನ್‌ಗೆ ದೃಷ್ಟಿ ತೆಗೆದ ಕುಟುಂಬಸ್ಥರು
– ನಟ ಪ್ರಯಾಣಿಸುತ್ತಿದ್ದ ಕಾರು ಬೆನ್ನತ್ತಿದ ಅಭಿಮಾನಿಗಳು

ಬಳ್ಳಾರಿ: ಸತತ 140 ದಿನಗಳ ಬಳಿಕ ಜೈಲಿನಿಂದ ಕೊಲೆ ಆರೋಪಿ ದರ್ಶನ್ (Darshan) ಬಿಡುಗಡೆ ಆಗುತ್ತಿದ್ದಂತೆ ಜೈಲ ಬಳಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ‘ಡಿ ಬಾಸ್.. ಜೈ ಡಿ ಬಾಸ್..’ ಎಂದು ಫ್ಯಾನ್ಸ್ ಜಯಘೋಷ ಕೂಗಿ ಹರ್ಷ ವ್ಯಕ್ತಪಡಿಸಿದರು.

ಬಳ್ಳಾರಿ ಜೈಲಿನ ಬಳಿ ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದ ಕಾರಣ, ದರ್ಶನ್ ಕುಟುಂಬಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಐವತ್ತು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ದರ್ಶನ್ ಹೊರಡುವ ವಾಹನಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಳ್ಳಾರಿ ದಾಟುವ ವರೆಗೂ ಪೊಲೀಸ್ ಭದ್ರತೆ ಇರಲಿದೆ. ಇಬ್ಬರು ಸಿಪಿಐ, ನಾಲ್ವರು ಪಿಎಸ್‌ಐ ಹಾಗೂ 50 ಪೊಲೀಸರ ಭದ್ರತೆ, ಒಂದು ಪೊಲೀಸ್ ವಾಹನ ಬೆಂಗಳೂರಿನ ವರೆಗೂ ತೆರಳುವ ಸಾಧ್ಯತೆ ಇದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – A8 ಆರೋಪಿ ರವಿಶಂಕರ್ ಬಿಡುಗಡೆ

ದರ್ಶನ್ ಹೊಸ ಬಟ್ಟೆ ಧರಿಸಿ ಜೈಲಿನಿಂದ ಹೊರಬಂದರು. ಬೆನ್ನುನೋವಿನ ಹಿನ್ನೆಲೆ ಕುಂಟುತ್ತಲೇ ನಡೆದು ಬಂದರು. ಪತಿಗಾಗಿ ವಿಜಯಲಕ್ಷ್ಮಿ ಅವರು ಹೊರಗಡೆ ಕಾದು ಕುಳಿತಿದ್ದರು. ದರ್ಶನ್ ಹೊರಬರುತ್ತಿದ್ದಂತೆ ಕುಟುಂಬಸ್ಥರು ಈಡುಗಾಯಿ ನೀವಳಿಸಿ ದೃಷ್ಟಿ ತೆಗೆದರು.

ನಟ ದರ್ಶನ್ ಹೊರಬಂದಿದ್ದನ್ನು ಕಂಡ ಅಭಿಮಾನಿಗಳು ಕಿರುಚಾಡಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿರುವುದನ್ನು ಕಂಡು ಒಂದುಕ್ಷಣ ದರ್ಶನ್ ಆವಕ್ಕಾದರು. ಭಾರಿ ಭದ್ರತೆಯೊಂದಿಗೆ ದರ್ಶನ್‌ರನ್ನು ಕಾರಿಗೆ ಹತ್ತಿಸಲಾಯಿತು. ಕಾರು ಏರುವಾಗಲೂ ದರ್ಶನ್ ತ್ರಾಸಪಟ್ಟರು. ಬೆನ್ನುನೋವು ಇರುವುದರಿಂದ ಕೊಂಚ ಕಷ್ಟದಲ್ಲೇ ಕಾರು ಹತ್ತಿದರು. ಬಳಿಕ ಬಳ್ಳಾರಿಯಿಂದ ಬೆಂಗಳೂರಿನ ಕಡೆ ಕಾರು ಪ್ರಯಾಣ ಬೆಳೆಸಿತು. ಇದನ್ನೂ ಓದಿ: ಜೈಲಿನಿಂದ ದರ್ಶನ್‌ ರಿಲೀಸ್‌ ಬೆನ್ನಲ್ಲೇ ಎಮೋಷನಲ್‌ ಪೋಸ್ಟ್‌ ಹಂಚಿಕೊಂಡ ಪುತ್ರ ವಿನೀಶ್

ದರ್ಶನ್ ಕಾರು ಪ್ರಯಾಣ ಮಾರ್ಗದ ಉದ್ದಕ್ಕೂ ಅಭಿಮಾನಿಗಳು ನಿಂತು ನಟನನ್ನು ಕಂಡು ಖುಷಿಯಾದರು. ಅನೇಕ ಅಭಿಮಾನಿಗಳು ದರ್ಶನ್ ಪ್ರಯಾಣಿಸುತ್ತಿದ್ದ ಕಾರನ್ನೇ ಹಿಂಬಾಲಿಸಿದರು.

ಅನಂತ್‌ಪುರ ಮಾರ್ಗದಲ್ಲಿ ಬೆಂಗಳೂರಿಗೆ ತಮ್ಮ ಟೊಯೋಟಾ ಕಾರಿನಲ್ಲಿ ದರ್ಶನ್ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’

Share This Article