ತಮಿಳಿನತ್ತ ‘ಸೀತಾರಾಮಂ’ ನಟಿ- ಸೂರ್ಯಗೆ ಮೃಣಾಲ್ ನಾಯಕಿ?

Public TV
1 Min Read

ತೆಲುಗಿನಲ್ಲಿ ಮೃಣಾಲ್ ಠಾಕೂರ್ (Mrunal Thakur) ನಟಿಸಿದ 3 ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗಿವೆ. ಹಾಗಾಗಿ ಅವರೀಗ ತಮಿಳಿನತ್ತ ಮುಖ ಮಾಡಿದ್ದಾರೆ. ತಮಿಳಿನ ಸ್ಟಾರ್ ನಟ ಸೂರ್ಯ (Suriya) ನಟಿಸಲಿರುವ ಹೊಸ ಚಿತ್ರಕ್ಕೆ ನಾಯಕಿಯಾಗಿ ‘ಸೀತಾರಾಮಂ’ (Seetharamam) ನಟಿ ಮೃಣಾಲ್ ಆಯ್ಕೆಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ.

ಸೂರ್ಯ ಅವರ ಮುಂದಿನ ಸಿನಿಮಾ ಫ್ಯಾಂಟಸಿ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಚಿತ್ರವನ್ನು ಆರ್‌ಜೆ ಬಾಲಾಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಮೃಣಾಲ್ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಇನ್ನೂ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ. ಇದನ್ನೂ ಓದಿ:ತ್ರಿವಿಕ್ರಮ್ ಗೋಮುಖ ವ್ಯಾಘ್ರ: ಕೆರಳಿದ ಮೋಕ್ಷಿತಾ

ಈ ಹಿಂದೆ ಮೃಣಾಲ್‌ಗೆ ‘ಕಂಗುವ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಒಪ್ಪಿಕೊಂಡಿರುವ ಸಿನಿಮಾಗಳಿದ್ದ ಹಿನ್ನೆಲೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರವನ್ನು ಮೃಣಾಲ್ ಮಿಸ್ ಮಾಡಿಕೊಂಡಿದ್ದರು. ಆ ನಂತರ ‘ಕಂಗುವ’ (Kanguva) ಚಿತ್ರದ ಆಫರ್ ದಿಶಾ ಪಟಾನಿ ಪಾಲಾಯಿತು.

ಸದ್ಯ ಪೂಜಾ ಮೇರಿ ಜಾನ್, ಹೇ ಜವಾನಿ ತೋ ಇಷ್ಟ ಹೋನಾ ಹಿ, ಸನ್ ಆಫ್ ಸರ್ದಾರ್ 2, ತುಮ್ ಓಹ್ ಹೋ ಚಿತ್ರಗಳಲ್ಲಿ ಮೃಣಾಲ್ ನಟಿಸುತ್ತಿದ್ದಾರೆ.

Share This Article