ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ಆಗಿ ಸಂಜೀವ್‌ ಖನ್ನಾ ನೇಮಕ – ನ.11ರಂದು ಪ್ರಮಾಣ ವಚನ

Public TV
1 Min Read

ನವದೆಹಲಿ: ನ್ಯಾ. ಸಂಜೀವ್‌ ಖನ್ನಾ (Sanjiv Khanna) ಅವರನ್ನು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಮೂರ್ತಿಯನ್ನಾಗಿ (CJI) ನೇಮಕ ಮಾಡಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಭಾರತದ ಸಂವಿಧಾನದ 124ನೇ ವಿಧಿಯ ಷರತ್ತು (2)ರ ಅನ್ವಯ ನೀಡಲಾದ ಅಧಿಕಾರ ಚಲಾಯಿಸುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಮುಂದಿನ ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ಅವರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಇದನ್ನೂ ಓದಿ: ಕಣ್ತೆರೆದ ನ್ಯಾಯದೇವತೆ – ಇಲ್ಲಿಯವರೆಗೂ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆರವುಗೊಳಿಸಿದ ಸುಪ್ರೀಂ ಕೋರ್ಟ್

ನವೆಂಬರ್‌ 11ರಂದು ಸಿಜೆಐ ಹುದ್ದೆಯಿಂದ ಹಾಲಿ ಸಿಜೆಐ ಚಂದ್ರಚೂಡ್‌ (DY ChandraChud) ನಿವೃತ್ತಿಯಾಗಲಿದ್ದಾರೆ. ಅಂದೇ ಸಂಜೀವ್‌ ಖನ್ನಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದು, 2025ರ ಮೇ 13ರ ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. 2019ರ ಜನವರಿ 18ರಂದು ನ್ಯಾ. ಸಂಜೀವ್‌ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌‌ ಹುದ್ದೆಗೆ ನೇಮಿಸಲಾಗಿತ್ತು. ಇದನ್ನೂ ಓದಿ: ಬಿಹಾರ, ಆಂಧ್ರಕ್ಕೆ ಬಂಪರ್‌ ಗಿಫ್ಟ್‌ – 6,798 ಕೋಟಿ ಮೊತ್ತದ 2 ರೈಲ್ವೇ ಯೋಜನೆಗಳಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು

2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್ (UU Lalit) ಅವರು ನಿವೃತ್ತಿ ಹೊಂದಿದ ಬಳಿಕ ಚಂದ್ರಚೂಡ್‌ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಯುಯು ಲಲಿತ್‌ ಅವರಿಗೂ ಮುನ್ನ ಎನ್.ವಿ.ರಮಣ (NV Ramana) ಅವರು 48ನೇ ಸಿಜೆಐ ಆಗಿ ಅಧಿಕಾರ ನಿರ್ವಹಿಸಿದ್ದರು. ಇದನ್ನೂ ಓದಿ: ಮಹಾ ಚುನಾವಣೆ: ಅಜಿತ್ ಪವಾರ್ ಬಣಕ್ಕೆ ಸಿಕ್ತು ಗಡಿಯಾರ ಚಿಹ್ನೆ – ಸುಪ್ರೀಂ ಕೋರ್ಟ್ ಅನುಮತಿ

Share This Article