5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿ ವೆಕೇಷನ್

Public TV
1 Min Read

ನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ (Amala Paul)  ಜಾಲಿ ಮೂಡ್‌ನಲ್ಲಿದ್ದಾರೆ. ಪತಿ ಮತ್ತು ಮಗುವಿನೊಂದಿಗೆ ಬಾಲಿಗೆ ನಟಿ ಹಾರಿದ್ದಾರೆ. ವೆಕೇಷನ್‌ನ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿಯ (Bali) ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಪತಿ, ಮಗುವಿನೊಂದಿಗೆ ಕುಳಿತು ಕ್ಯಾಮೆರಾಗೆ ಸುಂದರ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಹೊಸ ಗೆಟಪ್‌ನಲ್ಲಿ ಪ್ರಭಾಸ್- ‘ದಿ ರಾಜಾ ಸಾಬ್’ ಚಿತ್ರದ ಪೋಸ್ಟರ್ ಔಟ್

 

View this post on Instagram

 

A post shared by Amala Paul (@amalapaul)

ಅಂದಹಾಗೆ, ಉದ್ಯಮಿ ಜಗತ್ ದೇಸಾಯಿ (Jagath Desai) ಜೊತೆ ಅಮಲಾ ಕಳೆದ ವರ್ಷ ನವೆಂಬರ್‌ನಲ್ಲಿ ಮದುವೆಯಾದರು. ಈ ವರ್ಷ ಜೂನ್ 11ರಂದು ಗಂಡು ಮಗುವಿಗೆ ನಟಿ ಜನ್ಮ ನೀಡಿದರು. ಮಗುವಿಗೆ ಇಳೈ ಎಂದು ಹೆಸರಿಟ್ಟಿದ್ದಾರೆ.

ಇನ್ನೂ ಮದುವೆಯಾಗಿ ಮಗು ಆದ್ಮೇಲೆಯೂ ನಟಿ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಸಿನಿಮಾಗಳಲ್ಲಿ ನಟಿಸಲು ಕಥೆಗಳನ್ನು ಕೇಳ್ತಿದ್ದಾರೆ.

Share This Article