ಕೋಲಾರ | ಎಂಜಿನಿಯರಿಂಗ್ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದ ರೈತನ 9 ಎಕರೆ ಬೆಳೆ ನಾಶ

Public TV
1 Min Read

ಕೋಲಾರ: ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕೋಲಾರ (Kolar) ಜಿಲ್ಲೆಯ ಜನ್ನಘಟ್ಟ (Janaghatta) ಗ್ರಾಮದಲ್ಲಿ ಎಂಜಿನಿಯರ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದ ರೈತನ 9 ಎಕರೆ ಬೆಳೆ ನಾಶವಾಗಿದೆ.ಇದನ್ನೂ ಓದಿ: ಬೆಂಗಳೂರು ಕಟ್ಟಡ ಕುಸಿತ- ಮಾಲೀಕ, ಮಗನ ವಿರುದ್ಧ ಎಫ್‌ಐಆರ್ ದಾಖಲು

ರೈತ ನಂದನ್ ಗೌಡ ಎಂಬುವವರು ಸಿವಿಲ್ ಎಂಜಿನಿಯರ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದರು. ಒಟ್ಟು 9 ಎಕರೆ ತೋಟದಲ್ಲಿ 7 ಎಕರೆ ಎಲೆ ಕೋಸು ಹಾಗೂ 2 ಎಕರೆ ಹೂ ಕೋಸನ್ನು ಬೆಳೆದಿದ್ದರು. ಜೊತೆಗೆ ಟೊಮ್ಯಾಟೊ, ಹೂವು, ಕ್ಯಾಪ್ಸಿಕಂ, ಪಪ್ಪಾಯವನ್ನು ಬೆಳೆದಿದ್ದರು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಕೋಟ್ಯಂತರ ರೂ. ವಿವಿಧ ಬೆಳೆಗಳು ನಾಶವಾಗಿವೆ.

ಧಾರಾಕಾರ ಮಳೆಯಿಂದಾಗಿ ಮಳೆ ನೀರು ತೋಟಗಳಿಗೆ ನುಗ್ಗಿದ್ದು, ಅತಿಯಾದ ತೇವಾಂಶದಿಂದಾಗಿ ಎಲೆ ಕೋಸು ಕೊಳೆತು ಹೋಗಿದೆ. ಕೊಳೆತ ಕಾರಣ ಮಾರುಕಟ್ಟೆಗೂ ಕಳುಹಿಸಲಾಗುವುದಿಲ್ಲ. ಇತ್ತ ಪ್ರಾಣಿಗಳಿಗೂ ಆಹಾರವಾಗಿಯೂ ಹಾಕಲಾಗುವುದಿಲ್ಲ ಎಂದು ರೈತ ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ, ಲಾಭದ ನಿರೀಕ್ಷೆಯಲ್ಲಿದ್ದ ರೈತ ಪರದಾಡುವಂತಾಗಿದೆ.ಇದನ್ನೂ ಓದಿ: ತುಂಗಭದ್ರಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಮುಳುಗಡೆ ಹಂತ ತಲುಪಿದ ಕಂಪ್ಲಿ ಸೇತುವೆ

Share This Article