IND vs NZ 1st Test: ತವರು ನೆಲದಲ್ಲೇ ಟೀಂ ಇಂಡಿಯಾಗೆ ಸೋಲುಣಿಸಿದ ನ್ಯೂಜಿಲೆಂಡ್‌

Public TV
1 Min Read

– 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಕಿವೀಸ್‌  
– ಭಾರತದ ವಿರುದ್ಧ 8 ವಿಕೆಟ್‌ಗಳ ಜಯ; 1-0 ಅಂತರದಲ್ಲಿ ಕಿವೀಸ್‌ ಮುನ್ನಡೆ

ಬೆಂಗಳೂರು: ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್‌ 8 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಭಾರತ ನೀಡಿದ್ದ 107 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಸುಲಭ ಜಯಗಳಿಸಿತು. 1988 ರ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಕಿವೀಸ್‌ ಪಡೆ ಮೊದಲ ಜಯವನ್ನು ದಾಖಲಿಸಿತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲೂ ರಚಿನ್‌ ರವೀಂದ್ರ ಹಾಗೂ ವಿಲ್‌ ಯಂಗ್‌ ಉತ್ತಮ ಪ್ರದರ್ಶನ ತೋರಿ ಭಾರತಕ್ಕೆ ಸೋಲಿನ ರುಚಿ ತೋರಿದರು.

Share This Article