ಬೆಂಗ್ಳೂರಲ್ಲಿ 1 ಕೆಜಿ ಚಿನ್ನ ಕದ್ದು ತೀರ್ಥಹಳ್ಳಿಯಲ್ಲಿ ಹೂತಿಟ್ಟಿದ್ದ ಖತರ್ನಾಕ್ ಕಳ್ಳ!

Public TV
1 Min Read

ಶಿವಮೊಗ್ಗ: ಖತರ್ನಾಕ್ ಕಳ್ಳನೊಬ್ಬ ಬೆಂಗಳೂರಿನಲ್ಲಿ (Bengaluru) ಚಿನ್ನವನ್ನು ಕದ್ದು ತೀರ್ಥಹಳ್ಳಿಯ (Thirthahalli) ತನ್ನ ಮನೆಗೆ ತಂದು ಹೂತಿಟ್ಟಿದ್ದ ಪ್ರಕರಣವನ್ನು ಮಾಗಡಿ ಪೊಲೀಸರು (Police) ಬಯಲಿಗೆ ತಂದಿದ್ದಾರೆ.

ಹಮೀದ್ ಹಂಜ ಎಂಬಾತ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತನ್ನ ಮನೆಯಲ್ಲಿ ತಂದು ಹೂತಿಟ್ಟಿದ್ದ. ಆರೋಪಿಯನ್ನು ಕರೆ ತಂದಿದ್ದ ಮಾಗಡಿ ಪೊಲೀಸರು ಸುಮಾರು 1 ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಆಗುಂಬೆ ಸಮೀಪದ ಗುಡ್ಡೇಕೇರಿಯವನಾದ ಹಂಜನ ಮೇಲೆ 70 ರಿಂದ 80ಕ್ಕೂ ಹೆಚ್ಚು ಕೇಸ್‍ಗಳಿವೆ. ಆಗುಂಬೆ ಸಮೀಪದಲ್ಲಿ ನಡೆದಿದ್ದ ಹೊಸಳ್ಳಿ ವೆಂಕಟೇಶ್ ಕೊಲೆ ಪ್ರಕರಣದಲ್ಲೂ ಹಂಜ ಭಾಗಿಯಾಗಿದ್ದ. ಕೊಲೆ, ವಸೂಲಿ, ವಂಚನೆ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತಿಳಿದು ಬಂದಿದೆ.

ಹಲವಾರು ಪ್ರಕರಣಗಳಲ್ಲಿ ಭಾಗಿಯಾದ್ದ ಹಂಜ ಈಗ ಮಾಗಡಿ ಪೊಲೀಸರ ಅತಿಥಿಯಾಗಿದ್ದಾನೆ.

Share This Article