ಭೋಪಾಲ್‌ನಲ್ಲಿ 1,814 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್‌ – ಇಬ್ಬರು ಅರೆಸ್ಟ್‌

Public TV
1 Min Read

ಭೋಪಾಲ್: ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ ಬಳಿಯ ಕಾರ್ಖಾನೆಯೊಂದರ ಮೇಲೆ ದೆಹಲಿ (Delhi) ಎನ್‌ಸಿಬಿ ಹಾಗೂ ಗುಜರಾತ್‌ (Gujarat) ಎಟಿಎಸ್‌ ಅಧಿಕಾರಿಗಳು ದಾಳಿ ನಡೆಸಿ 1,814 ಕೋಟಿ ರೂ. ಮೌಲ್ಯದ MD ಮಾದಕವಸ್ತು ಹಾಗೂ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಬೃಹತ್‌ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: Delhi| ಕೋಟ್ಯಂತರ ಮೌಲ್ಯದ ಕೊಕೇನ್‌ ಪ್ರಕರಣದ ಹಿಂದೆ ಮಾಜಿ ಕಾಂಗ್ರೆಸ್‌ ನಾಯಕ

ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಭಾರೀ ಯಶಸ್ಸು ಸಿಕ್ಕಿದೆ. ಇದಕ್ಕಾಗಿ ATS ಮತ್ತು NCB ಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

MD ಮಾದಕ ವಸ್ತು ಲ್ಯಾಬ್-ನಿರ್ಮಿತವಾಗಿದೆ (ಸಿಂಥೆಟಿಕ್) ಇದರ ಬಳಕೆಯಿಂದ ಜನರಿಗೆ ಮತ್ತು ಬರುವುದಲ್ಲದೇ, ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ.

ಇತ್ತೀಚೆಗೆ ದೆಹಲಿಯಲ್ಲಿ ಪೊಲೀಸರು ದಾಳಿ ನಡೆಸಿ 5,600 ಕೋಟಿ ರೂ. ಮೌಲ್ಯದ 562 ಕೆಜಿ ಕೊಕೇನ್ (Cocaine) ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆಪಡೆದಿದ್ದರು. ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ತಂಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ದೆಹಲಿ ಪೊಲೀಸರ ಭರ್ಜರಿ ಬೇಟೆ – 2,000 ಕೋಟಿ ಮೌಲ್ಯದ ಕೊಕೇನ್ ವಶ

Share This Article