ನೀರಿನ ಟ್ಯಾಂಕ್‌ಗೆ ವಿಷಬೆರಕೆ: ವಾಟರ್‌ಮನ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Public TV
1 Min Read

ರಾಯಚೂರು: ಗ್ರಾಮಕ್ಕೆ ಸರಬರಾಜಾಗುವ ನೀರಿನ ಟ್ಯಾಂಕ್‌ಗೆ (Water Tank) ವಿಷ ಬೆರಕೆಯಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ತವಗ ಗ್ರಾಮದಲ್ಲಿ ನಡೆದಿದೆ.

ನೀರಿನ ಟ್ಯಾಂಕ್‌ಗೆ ವಿಷ ಬೆರಕೆಯಾಗಿದ್ದು, ಗ್ರಾಮ ಪಂಚಾಯಿತಿ ವಾಟರ್‌ಮನ್ (WaterMan) ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.ಇದನ್ನೂ ಓದಿ: ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದ ಪೂಜಾ ಗಾಂಧಿ

ನೀರು ಬಿಟ್ಟ ಕೂಡಲೇ ಕೆಲ ಗ್ರಾಮಸ್ಥರು ನೀರು ವಾಸನೆ ಬರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ನೀರನ್ನು ಪರಿಶೀಲಿಸಿದಾಗ ಅನುಮಾನ ಮೂಡಿ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ. ಟ್ಯಾಂಕ್ ಬಳಿ ಬೀಳುವ ನೀರು ಸಹ ನೊರೆ, ದುರ್ವಾಸನೆಯಿಂದ ಕೂಡಿದ್ದಕ್ಕೆ ಅನುಮಾನ ಮೂಡಿದೆ. ವಾಟರ್‌ಮನ್ ಆದೆಪ್ಪ ಕೂಡಲೇ ಟ್ಯಾಂಕ್ ಖಾಲಿ ಮಾಡಿದ್ದಾನೆ ಹಾಗೂ ನೀರನ್ನು ಯಾರು ಬಳಸದಂತೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

ದುಷ್ಕರ್ಮಿಗಳು ಜೀವಹಾನಿ ಮಾಡಲು ಈ ಕೃತ್ಯ ಎಸಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪರ್ಯಾಯ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. ವಾಟರ್‌ಮನ್ ಆದಪ್ಪ ದೂರು ನೀಡಿದ್ದು, ಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Mysuru Dasara: ಸುಧಾಮೂರ್ತಿ ಸಾಕಿದ ಶ್ವಾನ ಗೋಪಿಗೆ ಬಹುಮಾನ

Share This Article