ನಾಗ-ಸಮಂತಾ ಡಿವೋರ್ಸ್‌ ಹೇಳಿಕೆ ಹಿಂಪಡೆದು ಕ್ಷಮೆ – ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ಅಕ್ಕಿನೇನಿ ದೂರು

Public TV
2 Min Read

ಹೈದರಾಬಾದ್‌: ನಾಗಚೈತನ್ಯ ಮತ್ತು ನಟಿ ಸಮಂತಾ ರುತ್‌ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮರಾವ್‌ ಕಾರಣ ಎಂದು ಬಾಂಬ್‌ ಸಿಡಿಸಿ ವಿವಾದಕ್ಕೆ ಸಿಲುಕಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ (Konda Surekha) ವಿರುದ್ಧ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ದೂರು ದಾಖಲಿಸಿದ್ದಾರೆ.

ತಮ್ಮ ಮಗ ಮತ್ತು ಸಮಂತಾ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಕಾಂಗ್ರೆಸ್‌ ನಾಯಕರಿಗೆ (Congress Leaders) ದೂರು ಸಲ್ಲಿಸಿದ್ದಾರೆ. ಹೈದರಾಬಾದ್‌ನ ನಾಂಪಲ್ಲಿಯಲ್ಲಿ ದೂರು ದಾಖಲಿಸಿದ್ದಾರೆ. ಸುರೇಖಾ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ವೈಯಕ್ತಿ, ವೃತ್ತಿಪರ, ಕೌಟುಂಬಿಕ ಪ್ರತಿಷ್ಠೆಗೆ ಹಾನಿ ಮಾಡಿದ್ದಾರೆ. ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

ಕ್ಷಮೆಯಾಚಿಸಿದ ಸುರೇಖಾ
ತಮ್ಮ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಹಿಂದೇಟು ಹಾಕಿದ ಸಚಿವೆ ಕೊಂಡಾ ಸುರೇಖಾ ಹೇಳಿಕೆ ಹಿಂಪಡೆದು ಕ್ಷಮೆ ಕೋರಿದ್ದಾರೆ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ಮಾತಿನ ಭರದಲ್ಲಿ ಬಾಯಿತಪ್ಪಿ ಆಡಿದ ಮಾತಿದು. ತೆಲುಗು ಚಿತ್ರರಂಗದ ಕುರಿತು ನಾನು ನೀಡಿದ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕೆಟಿಆರ್‌ ವಿರುದ್ಧ ಮಾಡಿರುವ ಆರೋಪಗಳಿಗೆ ನಾನು ಬದ್ಧಳಾಗಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

ಸಮಂತಾ ಬಗ್ಗೆ ಗೌರವವಿದೆ:
ನನ್ನ ಹೇಳಿಕೆಯಿಂದ ನಟಿ ಸಮಂತಾ (Samantha Ruth Prabhu) ಅವರಿಗೆ ನೋವಾಗಿದ್ದರೆ ಈ ಕೂಡಲೇ ಹೇಳಿಕೆ ಹಿಂಪಡೆಯುತ್ತೇನೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಅನ್ಯಥಾ ಭಾವಿಸಬೇಡಿ. ನನ್ನ ಹೇಳಿಕೆ ರಾಜಕೀಯ ನಾಯಕರು ಮಹಿಳೆಯರನ್ನು ಕೀಳಾಗಿ ಕಾಣುವುದನ್ನು ಪ್ರಶ್ನಿಸುವ ಉದ್ದೇಶವಾಗಿತ್ತೇ ಹೊರತು ನಿಮ್ಮ (ಸಮಂತಾ) ಭಾವನೆಗಳನ್ನು ನೋಯಿಸುವುದು ಆಗಿರಲಿಲ್ಲ. ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲದೇ ಗೌರವವೂ ಇದೆ ಎಂದು ಹೇಳಿದ್ದಾರೆ.

ಕೆಟಿಆರ್‌ ಲೀಗಲ್‌ ನೋಟಿಸ್‌
ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನ ಕುರಿತು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಆರೋಪ ಕುರಿತು ಸಚಿವೆ ಕೊಂಡಾ ಸುರೇಖಾ ಅವರಿಗೆ ಕೆಟಿ ರಾಮರಾವ್‌ ಲೀಗಲ್‌ ನೋಟಿಸ್‌ ನೀಡಿದ್ದರು. ಸಚಿವೆ ಮಾಡಿರುವ ಆರೋಪವು ರಾಜಕೀಯ ಪ್ರೇರಿತವಾದುದು. ಇಂಥ ಹೇಳಿಕೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. 24 ಗಂಟೆಯೊಳಗೆ ಸುರೇಖಾ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

Share This Article