Delhi | ಚಿಕಿತ್ಸೆಗೆ ಬಂದು ವೈದ್ಯನ ಗುಂಡಿಕ್ಕಿ ಹತ್ಯೆಗೈದ ಅಪ್ರಾಪ್ತರು

Public TV
1 Min Read

ದೆಹಲಿ: ಇಲ್ಲಿನ (Delhi) ಜೈತ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ (Hospital) ಇಬ್ಬರು ಅಪ್ರಾಪ್ತರು 55 ವರ್ಷದ ವೈದ್ಯನನ್ನು (Doctor) ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಹತ್ಯೆಗೊಳಗಾದ ವೈದ್ಯನನ್ನು ಡಾ.ಜಾವೇದ್ ಅಖ್ತರ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ಇಬ್ಬರು 16-17 ವರ್ಷ ವಯಸ್ಸಿನವರು ತಡರಾತ್ರಿ ಆಸ್ಪತ್ರೆಗೆ ಬಂದಿದ್ದರು. ಅದರಲ್ಲಿ ಒಬ್ಬ ತನ್ನ ಗಾಯಗೊಂಡ ಕಾಲ್ಬೆರಳಿಗೆ ಡ್ರೆಸ್ಸಿಂಗ್ ಬದಲಾಯಿಸಲು ಕೇಳಿದ. ಆತನಿಗೆ ಚಿಕಿತ್ಸೆ ನೀಡಿ, ಡ್ರೆಸ್ಸಿಂಗ್ ಮಾಡಲಾಯಿತು. ಬಳಿಕ ತನಗೆ ಪ್ರಿಸ್ಕ್ರಿಪ್ಷನ್ ಬೇಕು ಎಂದು ಕೇಳಿದ. ಈ ವೇಳೆ ಡಾ.ಜಾವೇದ್ ಅಖ್ತರ್ ಅವರ ಕ್ಯಾಬಿನ್‌ಗೆ ಹೋದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಅವರ ತಲೆಗೆ ಗುಂಡು ತಗುಲಿದ್ದು ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

ಆರೋಪಿಗಳು 16 ಅಥವಾ 17 ವರ್ಷ ವಯಸ್ಸಿನವರಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಉದ್ದೇಶಿತ ಹತ್ಯೆಯ ಪ್ರಕರಣವೆಂದು ತೋರುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಶಂಕಿತರನ್ನು ಗುರುತಿಸಲು ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: Japan| ಏರ್‌ಪೋರ್ಟ್‌ ಬಳಿ 2ನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟ – ವಿಮಾನ ಹಾರಾಟ ರದ್ದು

Share This Article