ಇಸ್ರೇಲ್‌ ಮೇಲೆ ರಾಕೆಟ್‌ ಸುರಿಮಳೆ – ಏಕಕಾಲಕ್ಕೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್‌ ಅಟ್ಯಾಕ್‌

Public TV
2 Min Read

– ಕೆಲ ಗಂಟೆಗಳ ಮುಂಚೆಯೇ ಸುಳಿವು ಕೊಟ್ಟಿದ್ದ ಅಮೆರಿಕ

ಬೈರೂತ್: ಇಸ್ರೇಲ್ (Israel) ವಾಯುಪಡೆ ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಪ್ರಮುಖ ನಾಯಕರನ್ನ ಹತ್ಯೆಗೈದ ಬಳಿಕ ಇಸ್ರೇಲ್‌-ಇರಾನ್‌ ನಡುವಿನ ಯುದ್ಧ ಸ್ವರೂಪವು ಮತ್ತಷ್ಟು ತೀವ್ರಗೊಂಡಿದೆ.

ಇರಾನ್‌, ಇಸ್ರೇಲ್‌ ಮೇಲೆ ಏಕಕಾಲಕ್ಕೆ ನೂರಾರು ಕ್ಷಿಪಣಿಗಳನ್ನ ಹಾರಿಸಿದೆ. ಇಸ್ರೇಲ್‌ ವಿರುದ್ಧ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದ್ದು, ಇಸ್ರೇಲ್‌ನಾದ್ಯಂತ ಸೈರನ್‌ ಮೊಳಗಿದೆ.

ಟೆಲ್ ಅವೀವ್‌ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಇಸ್ರೇಲ್‌ ತನ್ನ ದೇಶದ ನಾಗರಿಕರಿಗೆ ತಿಳಿಸಿದೆ. ಭಾರತೀಯ ಕಾಲಮಾನ ರಾತ್ರಿ 10:08ರ ಸುಮಾರಿಗೆ ಇಸ್ರೇಲ್‌ ರಕ್ಷಣಾಪಡೆಗನ್ನು ಗುರಿಯಾಗಿಸಿ ಇರಾನ್‌ ರಾಕೆಟ್‌ ದಾಳಿ ನಡೆಸಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

ಸದ್ಯ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ತಿಳಿದುಬಂದಿಲ್ಲ. ಇಸ್ರೇಲ್‌ನ ಪ್ರಸಿದ್ಧ ಐರನ್ ಡೋಮ್ ಮತ್ತು ಆರೋ ರಕ್ಷಣಾ ವ್ಯವಸ್ಥೆಗಳಿಂದ ಕ್ಷಿಪಣಿಗಳನ್ನು ತಡೆಹಿಡಿಯಲು ಮುಂದಾಗಿದೆ. ಆದ್ರೆ ಜೆರುಸಲೇಂ ಮತ್ತು ಇತರೆಡೆಗಳಲ್ಲಿ ಸ್ಫೋಟ ಸಂಭವಿಸಿವೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

ಇಸ್ರೇಲ್‌ ಭದ್ರತಾ ಮಂಡಳಿಯ ತುರ್ತು ಸಭೆ:
ಇರಾನ್‌ ರಾಕೆಟ್‌ ದಾಳಿ ಬೆನ್ನಲ್ಲೇ ಇಸ್ರೇಲ್‌ ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದೆ. ಪ್ರಸಕ್ತ ವರ್ಷದಲ್ಲಿ ಇದೇ ಮೊದಲಬಾರಿಗೆ ಜೆರುಸಲೆಂನ ಬಂಕರ್‌ನಲ್ಲಿ ಭದ್ರತಾ ಮಂಡಳಿಯ ಸಭೆ ಕರೆಯಲಾಗಿದೆ. ಅಲ್ಲದೇ ಪ್ರತಿ ದಾಳಿಯ ಎಚ್ಚರಿಕೆಯನ್ನೂ ನೀಡಿವೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಆದ್ರೆ ಈ ದಾಳಿ ಬಗ್ಗೆ ಇರಾನ್‌ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article