Kantara Chapter 1: ರಿಷಬ್ ಶೆಟ್ಟಿ ತಂದೆ ಪಾತ್ರದಲ್ಲಿ ಮೋಹನ್‌ಲಾಲ್?

Public TV
1 Min Read

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ (Rishab Shetty) ಸದ್ಯ ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಕಾಂತಾರ’ ಪಾರ್ಟ್ 1ರಲ್ಲಿ ರಿಷಬ್ ತಂದೆಯ ಪಾತ್ರದಲ್ಲಿ ಮೋಹನ್‌ಲಾಲ್ (Mohanlal) ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದಸರಾ ಆನೆಗಳ ಮಾವುತರಿಗೆ ಪಾದರಕ್ಷೆ ಕೊಟ್ಟ ಡಾಲಿ

ಕೆಲ ತಿಂಗಳುಗಳ ಹಿಂದೆ ರಿಷಬ್ ಅವರು ಮೋಹನ್‌ಲಾಲ್‌ರನ್ನು ಭೇಟಿಯಾಗಿದ್ದರು. ಅದೀಗ ಚಿತ್ರದಲ್ಲಿ ರಿಷಬ್ ತಂದೆ ಪಾತ್ರದಲ್ಲಿ ನಟಿಸಲು ಮೋಹನ್‌ಲಾಲ್‌ರನ್ನು ಭೇಟಿಯಾಗಿದ್ದರು ಎಂದೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಿಲ್ಲ. ಈ ವಿಚಾರ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಪ್ರತಿಕ್ರಿಯೆ ನೀಡಬೇಕಿದೆ.

ಅಂದಹಾಗೆ, ರಿಷಬ್ ‘ಕಾಂತಾರ ಚಾಪ್ಟರ್ 1’ರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್‌ನಿಂದ 50 ದಿನಗಳ ಸುದೀರ್ಘವಾಗಿ ಚಿತ್ರೀಕರಣ ನಡೆಯಲಿದೆ. ಕುಂದಾಪುರದಲ್ಲಿ ಇಡೀ ಚಿತ್ರತಂಡ ಬೀಡು ಬಿಟ್ಟಿದೆ.

Share This Article