IPL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್‌

Public TV
2 Min Read

– ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಐತಿಹಾಸಿಕ ನಿರ್ಣಯ

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ (IPL 2025) ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. 2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನವೇ ಬಿಸಿಸಿಐ ಆಟಗಾರರಿಗೆ ಭರ್ಜರಿ ಗಿಫ್ಟ್‌ ನೀಡಿದೆ. ಟೂರ್ನಿ ವೇಳೆ ಲೀಗ್‌ ಪಂದ್ಯಅಗಳನ್ನಾಡುವ ಪ್ರತಿಯೊಬ್ಬ ಆಟಗಾರನೂ ಹರಾಜಿನಲ್ಲಿ ನಿಗದಿಯಾದ ಮೊತ್ತಕ್ಕಿಂತ ಹೆಚ್ಚುವರಿ ನಗದು ಹಣವನ್ನು ಪಡೆಯಲಿದ್ದಾರೆ ಎಂದು ಬಿಸಿಸಿಐ (BCCI) ಘೋಷಣೆ ಮಾಡಿದೆ.

ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ತಮ್ಮ ಎಕ್ಸ್‌ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಈವರೆಗಿನ ಲೀಗ್‌ನಲ್ಲಿ ಆಟಗಾರರು ಹರಾಜಿನಲ್ಲಿ ಪಡೆದ ಮೊತ್ತ ಪಡೆಯುತ್ತಿದ್ದರು. ಇದರೊಂದಿಗೆ ಸೂಪರ್‌ ಸಿಕ್ಸ್‌, ಬೌಂಡರಿ, ಕ್ಯಾಚ್‌, ಎಲೆಕ್ಟ್ರಿಕ್‌ ಸ್ಟ್ರೈಕರ್‌, ಪ್ಲೇಯರ್‌ ಆಫ್‌ದಿ ಮ್ಯಾಚ್‌, ಪ್ಲೇಯರ್‌ ಆಫ್‌ ದಿ ಸೀರಿಸ್‌ ಮೂಲಕ ಹೆಚ್ಚುವರಿ ನಗದು ಬಹುಮಾನ ಪಡೆಯುತ್ತಿದ್ದರು. ಇನ್ಮುಂದೆ ಇದರ ಹೊರತಾಗಿ ಪ್ರತಿ ಲೀಗ್‌ ಪಂದ್ಯದಲ್ಲೂ ಆಟಗಾರರು ಹೆಚ್ಚುವರಿಯಾಗಿ ಲಕ್ಷ ಲಕ್ಷ ಹಣ ಗಳಿಸಲಿದ್ದಾರೆ. ಇದನ್ನೂ ಓದಿ: IPL 2025 | ಮುಂಬೈ, ಆರ್‌ಸಿಬಿಗೆ ಬಿಗ್‌ ಶಾಕ್‌ – ದೈತ್ಯ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

ಜಯ್‌ ಶಾ ಎಕ್ಸ್‌ ಖಾತೆಯಲ್ಲಿ ಏನಿದೆ?
ಐತಿಹಾಸಿಕ ಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಆಡುವ ಕ್ರಿಕೆಟಿಗರಿಗೆ ಪಂದ್ಯ ಶುಲ್ಕವನ್ನು ಘೋಷಿಸಿದೆ. ಹರಾಜಿನಲ್ಲಿ ಬಿಕರಿಯಾದ ನಂತರ ಕಾಂಟ್ರ್ಯಾಕ್ಟ್‌ನೊಂದಿಗೆ ಪ್ರತಿ ಆಟಗಾರನೂ ಒಂದು ಪಂದ್ಯಕ್ಕೆ 7.5 ಲಕ್ಷ ರೂ. ಪಡೆಯುತ್ತಾರೆ. ಈ ಪೈಕಿ ಆಟಗಾರನೊಬ್ಬ ಒಂದು ಋತುವಿನಲ್ಲಿ ಎಲ್ಲಾ ಲೀಗ್‌ ಪಂದ್ಯಗಳನ್ನು ಆಡಿದರೆ, ಹರಾಜಿನಲ್ಲಿ ನಿಗದಿಯಾದ ಹಣ ಹೊರತುಪಡಿಸಿ, ಹೆಚ್ಚುವರಿಯಾಗಿ 1.05 ಕೋಟಿ ರೂ. ಹೆಚ್ಚುವರಿ ಲಾಭ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿ ಮೀಸಲಿಡುತ್ತವೆ. ಐಪಿಎಲ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಆಟಗಾರರಲ್ಲಿ ಅತ್ತುತ್ತಮ ಪ್ರದರ್ಶನಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ? 

ಪರ್ಸ್‌ ಇನ್ನಷ್ಟು ದೊಡ್ಡದಾಗುವ ಸಾಧ್ಯತೆ:
ಮೂರು ವರ್ಷಗಳ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್‌ ಫ್ರಾಂಚೈಸಿಗಳ ಪರ್ಸ್‌ ಈ ಬಾರಿ ಇನ್ನಷ್ಟು ದೊಡ್ಡದಾಗುವ ಸಾಧ್ಯತೆಗಳಿವೆ. ಪ್ರತಿ ಫ್ರಾಂಚೈಸಿಯ ಮೊತ್ತ ಸದ್ಯ 100 ಕೋಟಿ ರೂ. ಮಿತಿಯಿದ್ದು, 115 ರಿಂದ 120 ಕೋಟಿ ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಉಲ್ಲೇಖಿಸಿವೆ. ಮುಂದಿನ ನವೆಂಬರ್ 12ನೇ ವಾರದಲ್ಲಿ ಮೆಗಾ ಹರಾಜಿನ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

Share This Article