ಮಕ್ಕಳಲ್ಲಿ ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು `ಲಿಲ್ ಬಿಗ್ ಫ್ಯಾಂಟಸಿ’ ಸೈನ್ಸ್‌ ಬಸ್‌ ಅನಾವರಣ

By
4 Min Read

– ಕ್ರಿಯಾಶೀಲ ಮಕ್ಕಳಿಗುಂಟು ನಾಸಾಗೆ ಭೇಟಿ ನೀಡುವ ಬಂಪರ್‌ ಆಫರ್‌

ಬೆಂಗಳೂರು: ವಿಜ್ಞಾನ ಲೋಕದ (Science World) ಕೌತಕಗಳನ್ನು ಮಕ್ಕಳು ಕಣ್ತುಂಬಿಕೊಳ್ಳಲು ಮಕ್ಕಳು ಬಾಹ್ಯಾಕಾಶಕ್ಕೇ ಹೋಗಬೇಕಿಲ್ಲ. ಈಗ ಮಕ್ಕಳ ಬಳಿಗೇ ಬರುತ್ತಿದೆ ʻಲಿಲ್ ಬಿಗ್ ಫ್ಯಾಂಟಸಿʼಹೆಸರಿ (Lil Big Fantasy) ಸೈನ್ಸ್‌ ಬಸ್‌!

ಹೌದು. ಮಕ್ಕಳಿಗೆ ವಿಜ್ಞಾನ ಲೋಕದ ಕೌತುಕಗಳ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ವಿಜ್ಞಾನ ಅನ್ವೇಷಿಸಿ, ಅದರ ಅನುಭವ ಪಡೆದುಕೊಳ್ಳಲು ಐಟಿಸಿ ಸನ್‌ಫೀಸ್ಟ್‌ ಡಾರ್ಕ್‌ ಫ್ಯಾಂಟಸಿ ಅವರಿಂದ ಈ ವಿನೂತನ ಸೈನ್ಸ್‌ಬಸ್‌ವೊಂದನ್ನ (Science Bus) ಅನಾವರಣಗೊಳಿಸಲಾಗಿದೆ. ಇಸ್ರೋ ಮಾಜಿ ಅಧ್ಯಕ್ಷ ಪ್ರಕಾಶ್ ರಾವ್, ಬಾಲಿವುಡ್‌ ನಟಿ ಮಂದಿರಾ ಬೇಡಿ, ನಿಮ್ಹಾನ್ಸ್‌ನ ಡಿಎಂ ಡಾ.ಮೇಘಾ ಮಹಾಜನ್, ಐಟಿಸಿ ಲಿಮಿಟೆಡ್ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, ಫುಡ್ಸ್ ಡಿವಿಷನ್ ಸಿಒಒ ಅಲಿ ಹ್ಯಾರಿಸ್ ಶೇರ್ ಬಸ್‌ನನ್ನು ಅನಾವರಣಗೊಳಿಸಿದರು. ಇದನ್ನೂ ಓದಿ: ಬೆಂಗಳೂರು ಜನ್ರ ದುಡ್ಡು ಚೀನಾ ಕಂಪನಿಗಳಿಗೆ ಜಮೆ – ಉತ್ತರ ಸೈಬರ್ ಠಾಣೆಯಲ್ಲಿ 122 ಕೇಸ್ ಪತ್ತೆ

ಈ ಕುರಿತು ಮಾತನಾಡಿದ ಇಸ್ರೋ (ISRO) ಮಾಜಿ ನಿರ್ದೇಶಕ ಪ್ರಕಾಶ್‌ ರಾವ್‌, ಪ್ರತಿಯೊಂದು ಮಕ್ಕಳಲ್ಲೂ ವಿಶೇಷ ಪರಿಕಲ್ಪನೆಗಳಿರುತ್ತವೆ. ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಅವರ ಸೃಜನಶೀಲತೆಯನ್ನು ಉತ್ತೇಜಿಸಿ ಅವರ ಕಲ್ಪನೆಗೆ ಜೀವ ನೀಡುವ ಉದ್ದೇಶದಿಂದ ಈ ಸೈನ್ಸ್‌ ಬಸ್‌ನನ್ನು ಐಟಿಸಿ ತಂಡ ಬಿಡುಗಡೆ ಮಾಡಿದೆ. ಮಕ್ಕಳು ಈ ಬಸ್‌ನಲ್ಲಿ ತಮ್ಮ ಕಲ್ಪನೆಯನ್ನು ಜೀವಂತವಾಗಿಸಿಕೊಳ್ಳಬಹುದು. ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬಹುದು ಎಂದು ಹೇಳಿದರು. ಈ ರೀತಿಯ ಪ್ರಯತ್ನಗಳು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಹಾಗೂ ಕುತೂಹಲ ಮೂಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಐಟಿಸಿ ಲಿಮಿಟೆಡ್ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್, ಫುಡ್ಸ್ ಡಿವಿಷನ್ ಸಿಒಒ ಅಲಿ ಹ್ಯಾರಿಸ್ ಶೇರ್ ಮಾತನಾಡಿ, ಈಗಿನ ಮಕ್ಕಳು ಸಾಕಷ್ಟು ಫ್ಯಾಂಟಸಿ ಆಲೋಚನೆಗಳನ್ನು ಹೊಂದಿರುತ್ತಾರೆ. ಅವರ ಆಲೋಚನೆಗಳಿಗೆ ತಕ್ಕಂತೆ ಐಟಿಸಿ ತಂಡ ಈ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಸೈನ್ಸ್‌ ಬಸ್‌ನನ್ನು ತಯಾರಿಸಿದೆ. ಇದರಿಂದ ಮಕ್ಕಳ ಫ್ಯಾಂಟಸಿ ಮತ್ತು ಕಲ್ಪನಾಶೀಲತೆಯನ್ನು ಇಲ್ಲಿ ಪ್ರದರ್ಶಿಸಬಹುದು. ಈ ಬಸ್‌ನಲ್ಲಿ ಅಳವಡಿಸಿರುವ ತಂತ್ರಜ್ಞಾನದಲ್ಲಿ. ಮಕ್ಕಳು ತಮಗೆ ಇಷ್ಟವಾದ ಚಿತ್ರ, ಕಾರ್ಟೂನ್‌ ಅಥವಾ ಯಾವುದೇ ಕಲೆಯನ್ನು ಇಲ್ಲಿ ತಮ್ಮ ಕೈಯಿಂದ ಬಿಡಿಸಿದರೆ, ಅದು 3D ಸಂವಾದಾತ್ಮಕ ಅಕ್ಷರಗಳಾಗಿ ಪರಿವರ್ತನೆಗೊಂಡು ಡಿಜಿಟಲ್‌ ರಚನೆಯಾಗಿ ಪರದೆ ಮೇಲೆ ಪ್ರದರ್ಶನಗೊಳ್ಳಲಿದೆ. ಇದು ಮಕ್ಕಳಿಗೆ ತಾರಾಲಯದ ಅನುಭವ ನೀಡುವ ಜೊತೆಗೆ ನಮ್ಮ ವಿಜ್ಞಾನದ ಕೂತೂಹಲಗಳ ಬಗ್ಗೆಯೂ ಮಾಹಿತಿ ನೀಡಲಿದೆ ಎಂದರು. ಅಲ್ಲದೇ ಈ ಮೂಲಕ ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲ ಉದ್ದೇಶವನ್ನು ಒಳಗೊಂಡಿದೆ ಎಂದು ವಿವರಿಸಿದರು.

ಬಾಲಿವುಡ್‌ ನಟಿ ಮಂದಿರಾ ಬೇಡಿ ಮಾತನಾಡಿ, ನನ್ನ ಮಗಳಿಗೆ ಈಗ 8 ವರ್ಷ, ಆಕೆ ಪ್ರತಿದಿನ ಒಂದೊಂದು ಕಲ್ಪನೆ ಮಾಡಿಕೊಳ್ಳುತ್ತಾಳೆ. ಒಮ್ಮೆ ತಾನು ಪೈಲೆಟ್‌ ಆಗ ಬಯಸುವೆನ್ನುವ ಆಕೆ, ಮತ್ತೊಂದು ದಿನ ಶೆಫ್‌ ಆಗುವೆ ಅಂತಾಳೆ. ಹೀಗೆ ಮಕ್ಕಳ ಕಲ್ಪನೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅವರ ಕಲ್ಪನೆಗೆ ರೆಕ್ಕೆ ಪುಕ್ಕ ನೀಡುವುದು ನಮ್ಮ ಜವಾಬ್ದಾರಿ, ಈ ನಿಟ್ಟಿನಲ್ಲಿ ಐಟಿಸಿ ತಂಡ ಈ ಪ್ರಯತ್ನ ಮಾಡುವ ಮೂಲಕ ಮಕ್ಕಳ ವಿನೂತನ ಕಲ್ಪನೆಗಳಿಗೆ ರೆಕ್ಕೆ ಕಟ್ಟಿದಂತಾಗಲಿದೆ ಎಂದರು. ಸಮಾರಂಭದಲ್ಲಿ ಸೇಂಟ್ ಜೋಸೆಫ್ ಶಾಲೆ ಪ್ರಾಂಶುಪಾಲ ರೋಹನ್ ಡಿ ಅಲ್ಮೇಡಾ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್ `ದಶೋತ್ಸವ’ – ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮ

NASAಗೆ ಭೇಟಿ ನೀಡುವ ಅವಕಾಶ:
ಈ ಬಸ್‌ನಲ್ಲಿ ಮಕ್ಕಳು ತಮ್ಮ ಆಸಕ್ತಿದಾಯಕ ವಿಚಾರ ಹಾಗೂ ಕಲೆಯನ್ನು ಪ್ರದರ್ಶಿಸಬಹುದು. ಯಾವ ಮಗುವಿನ ಕಲ್ಪನೆಯು ಹೆಚ್ಚು ವಿಭಿನ್ನ ಹಾಗೂ ವಿಶೇಷವಾಗಿರುತ್ತದೆಯೋ ಅಂತಹ ಆಯ್ದ ಮಕ್ಕಳನ್ನ ನಾಸಾಗೆ ಕರೆದೊಯ್ಯುವ ಕೆಲಸವನ್ನು ಐಟಿಸಿ ಡಾರ್ಕ್‌ ಫ್ಯಾಂಟಸಿ ತಂಡ ಮಾಡಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಈ ಹೊಸ ಬಸ್‌ಗೆ ಚಾಲನೆ ಸಿಕ್ಕಿದ್ದು, ಈ ಬಸ್‌ ಇಡೀ ದೇಶಾದ್ಯಂತ ಎಲ್ಲೆಡೆ ಸಂಚರಿಸಿ, ಕೋಟ್ಯಂತರ ಮಕ್ಕಳ ಕ್ರಿಯಾತ್ಮಕತೆ ಹಾಗೂ ಕಲ್ಪನೆಗೆ ಸಾಕ್ಷಿಯಾಗಲಿದೆ. ಇದನ್ನೂ ಓದಿ: ಶೀಘ್ರದಲ್ಲೇ APMCಗಳ ಡಿಜಿಟಲೀಕರಣ ಕಾರ್ಯ ಪೂರ್ಣ: ಸಚಿವ ಶಿವಾನಂದ ಪಾಟೀಲ್‌

ಬಸ್‌ನ ವಿಶೇಷತೆ ಏನು?
ʻಫ್ಯಾಂಟಸಿ ಸ್ಪೇಸ್‌ಶಿಪ್‌ʼ ಆಗಿರುವ ಈ ಬಸ್‌ ಹಲವು ವಿಶೇಷ ಹಾಗೂ ಕೌತುಕದಿಂದ ಕೂಡಿದೆ. ಈ ಬಸ್‌ನಲ್ಲಿ ವಿಸ್ತಾರವಾದ ಸಂವಾದಾತ್ಮಕ ಪರದೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಂಯೋಜನೆಯಿಂದ ನಡೆಸಲ್ಪಡುತ್ತದೆ. ಈ ಬಸ್‌ನಲ್ಲಿ, ಮಕ್ಕಳು ತಮ್ಮ ಕೈಯಿಂದ ಬಿಡಿಸದ ಚಿತ್ರ ಅಥವಾ ಪಾತ್ರವು ರೋಮಾಂಚಕ ಡಿಜಿಟಲ್ ರಚನೆಗಳಾಗಿ ಪರಿವರ್ತನೆಗೊಳ್ಳಲಿದೆ. ಮಕ್ಕಳು ಪೇಪರ್‌ ಮೇಲೆ ಬರೆದ ಈ ಕಲಾಕೃತಿಯನ್ನು ಸ್ಕ್ಯಾನ್ ಮಾಡಿದ ನಂತರ, ಅವರ ಕ್ಯಾರೆಕ್ಟರ್‌ಗಳು ಅಥವಾ ಕಲಾಕೃತಿಗಳು ಸ್ಪೇಸ್‌ಶಿಪ್‌ನಲ್ಲಿ ಡಿಜಿಟಲ್ ರೂಪದಲ್ಲಿ 3D ಸಂವಾದಾತ್ಮಕ ಅಕ್ಷರಗಳಾಗಿ ಪ್ರದರ್ಶನಗೊಳ್ಳಲಿದೆ. ಈ ಸ್ಕ್ರೀನ್‌ನಲ್ಲಿ ಮೂಡಿಬರುವ ಕಲಾಕೃತಿಗಳನ್ನು ಮಕ್ಕಳು ತಮ್ಮ ಕೈಯಲ್ಲಿ ಮುಟ್ಟುವ ಮೂಲಕ ತಾವೇ ಸ್ಪೇಸ್‌ಶಿಪ್‌ನಲ್ಲಿ ಓಡಾಡುತ್ತಿರುವ ಅನುಭವ ಪಡೆಯಬಹುದು. ಬಾಹ್ಯಾಕಾಶಯಾನ ಮಾಡುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಮಕ್ಕಳಿಗೆ ಆಕಾಶಯಾನದ ಬಗ್ಗೆ ಹೆಚ್ಚೆಚ್ಚು ಕಲ್ಪನೆಗಳಿರುತ್ತವೆ. ಈ ಬಸ್‌ನಲ್ಲಿ 3ಡಿ ಎಫೆಕ್ಟ್‌ ಮೂಲಕ ಮಕ್ಕಳು ಬಾಹ್ಯಾಕಾಶ ಯಾನದ ನೈಜ ಅನುಭವ ಪಡೆದುಕೊಳ್ಳಬಹುದು. ನೂರಾರು ಕಕ್ಷೆಗಳು ತಮ್ಮ ಸುತ್ತುವ, ಹಾದು ಹೋಗುವ ಅನುಭವ, ಗಗನಯಾತ್ರಿಕರು ನಮ್ಮ ಸುತ್ತಲೇ ಸುತ್ತುತ್ತಿರುವ ಅನುಭವ ಹೀಗೆ ಆಕಾಶಯಾನದ ವಾಸ್ತವ ಆನಂದವನ್ನು ಮಕ್ಕಳು ಈ ಬಸ್‌ನಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇದಷ್ಟೇ ಅಲ್ಲದೇ, ಇನ್ನಷ್ಟು ವಿಶೇಷ ಹಾಗೂ ವಿಜ್ಞಾನದ ಅನುಭವವನ್ನು ಪಡೆದುಕೊಳ್ಳಬಹುದು.

Share This Article