ಚನ್ನಪಟ್ಟಣವನ್ನು ಚಿನ್ನದ ಪಟ್ಟಣ ಮಾಡುತ್ತೇವೆ : ಡಿಕೆಶಿ ಘೋಷಣೆ

Public TV
2 Min Read

ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna by Election) ಹಿನ್ನೆಲೆ ಅಭಿವೃದ್ಧಿ ಕೆಲಸಗಳ ಮೂಲಕ ಕ್ಷೇತ್ರದ ಜನರ ಓಲೈಕೆಗೆ ಮುಂದಾಗಿರುವ ಸರ್ಕಾರ ಕ್ಷೇತ್ರಕ್ಕೆ ಭರ್ಜರಿ ಅನುದಾನ ನೀಡಿದೆ. ಈ ಹಿನ್ನೆಲೆ ಇಂದು ಚನ್ನಪಟ್ಟಣದಲ್ಲಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಚನ್ನಪಟ್ಟಣವನ್ನು ಚಿನ್ನದ ಪಟ್ಟಣ (Chinnada Pattana) ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಟ್ಟೆಕೆರೆಯ ಕುಡಿಯುವ ನೀರಿನ ಕಟ್ಟೆ ಬಳಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ಅರ್ಕಾವತಿ ರೀಡೂ ಪ್ರಕರಣದತ್ತ ರಾಜ್ಯಪಾಲರ ಚಿತ್ತ – ಸಿಎಂಗೆ ಮತ್ತೊಂದು ಸಂಕಷ್ಟ?

ಈ ಕಾರ್ಯಕ್ರಮದ ಬಳಿಕ ಡಿಸಿಎಂ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ರಹೀಮ್ ಖಾನ್ ಅವರೊಡಗೂಡಿ ಹಜರತ್ ಸೈಯದ್ ಮೊಹಮ್ಮದ್ ಆಖೀಲ್ ಶಾ ಖಾದ್ರಿ ಅಲ್- ಬಾಗ್ದಾದಿ ದರ್ಗಾಕ್ಕೆ ಭೇಟಿ ನೀಡಿ ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು.

ಚನ್ನಪಟ್ಟಣ ನಗರ ನಿವಾಸಿಗಳಿಗೆ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಐಡಿಎಸ್ ಎಸ್ ಎಂಟಿ ಲೇಔಟ್‌ ಬಳಿ 10 ಎಕರೆ 6 ಗುಂಟೆ ವಿಸ್ತೀರ್ಣದಲ್ಲಿ ನಿವೇಶನಗಳನ್ನು ವಿತರಿಸಲು ಲಾಟರಿ ಮೂಲಕ ಫಲನುಭವಿಗಳನ್ನು ಆಯ್ಕೆ ಮಾಡಿ 300 ನಿವೇಶನ ಹಾಗೂ ಪಟ್ಲು ಗ್ರಾಮದಲ್ಲಿ 500 ನಿವೇಶನಗಳನ್ನ ಆಶ್ರಯ ಸಮಿತಿ ಮತ್ತು ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಹಂಚಲಾಯಿತು.

ಈ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಜನ ಈಗ ಅವಕಾಶ ಕೊಟ್ಟಿದ್ದಾರೆ, ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇಡೀ ಸರ್ಕಾರವೇ ನಿಮ್ಮ ಮನೆ ಬಾಗಿಲಿದೆ ಬಂದಿದ್ದು, ನಿಮ್ಮ ಸೇವೆ ಮಾಡ್ತಿದೆ. ಜನ ನಮಗೆ ಸಹಕಾರ ನೀಡದರೆ ಚನ್ನಪಟ್ಟಣ ನಗರವನ್ನ ಚಿನ್ನದ ನಾಡು ಮಾಡುತ್ತೇವೆ ಎಂದು ಹೇಳಿದರು.

 

Share This Article