ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ರಾಹುಲ್‌ ಬಾಬಾ ಐಸ್‌ಕ್ರೀಂ ತಿಂದಿದ್ದಾರೆ, ಬೈಕ್‌ ರೈಡ್‌ ಮಾಡಿದ್ದಾರೆ: ಅಮಿತ್‌ ಶಾ

By
2 Min Read

ಶ್ರೀನಗರ: ಕಾಶ್ಮೀರ (Jammu Kashmir) ಈಗ ಸುರಕ್ಷಿತವಾಗಿರುವುದರಿಂದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಐಸ್ ಕ್ರೀಮ್ ತಿಂದಿದ್ದಾರೆ ಮತ್ತು ಬೈಕ್ ಓಡಿಸಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ (Amit Shah) ಕಾಲೆಳೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ನಾವು ಕಾಶ್ಮೀರವನ್ನು ಸುರಕ್ಷಿತಗೊಳಿಸಿದ್ದೇವೆ. ರಾಹುಲ್ ಬಾಬಾ ಕಾಶ್ಮೀರದಲ್ಲಿ ಬೈಕ್ ಓಡಿಸಿದ್ದಾರೆ ಮತ್ತು ಲಾಲ್ ಚೌಕ್‌ನಲ್ಲಿ ಐಸ್‌ಕ್ರೀಂ (Ice Cream) ತಿನ್ನುತ್ತಿದ್ದಾಗ ಮೋದಿಜಿಯನ್ನು ನಿಂದಿಸಿದ್ದಾರೆ. ನೀವು ಮೋದಿ ಅವರನ್ನು ನೀವು ನಿಂದಿಸಬಹುದು. ಆದರೆ ನಿಮ್ಮ ಸರ್ಕಾರದಲ್ಲಿ ಇಲ್ಲಿ ಶಾಂತಿ ಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ. ಮೋದಿಯವರು ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ ಎಂದರು. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್

 

ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶ್ರೀನಗರದ ಲಾಲ್ ಚೌಕ್‌ನಲ್ಲಿರುವ (Lal Chowk) ಅಂಗಡಿಯಲ್ಲಿ ಐಸ್ ಕ್ರೀಮ್ ತಿಂದಿದ್ದರು. ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ಲಡಾಖ್‌ನಲ್ಲಿ ಬೈಕ್ ಓಡಿಸಿದ್ದರು. ಈ ವಿಚಾರವನ್ನು ಪ್ರಸ್ತಾಪ ಮಾಡಿ ಅಮಿತ್‌ ಶಾ ವ್ಯಂಗ್ಯವಾಡಿದರು.

ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾಗಲೂ ಕಾಶ್ಮೀರಕ್ಕೆ ತೆರಳಲು ತಾನು ಹೆದರುತ್ತಿದ್ದೆ ಎಂದು ಮಾಜಿ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ಶಾ ವಾಗ್ದಾಳಿ ನಡೆಸಿದರು.

 

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ (Sushil Kumar Shinde) ಅವರು ಲಾಲ್‌ ಚೌಕ್‌ಗೆ ಬರಲು ನಾನು ಹೆದರಿದ್ದೆ ಎಂದು ಹೇಳಿದ್ದಾರೆ. ಶಿಂಧೆ ಸಾಹೇಬರೇ, ಈಗ ನಿಮ್ಮ ಮಕ್ಕಳೊಂದಿಗೆ ಬಂದು ಲಾಲ್ ಚೌಕ್ ನಲ್ಲಿ ಸಂಚರಿಸಿ. ನಿಮ್ಮ ಮೇಲೆ ಯಾರು ದಾಳಿ ಮಾಡುವ ಧೈರ್ಯತೋರಿಸುವುದಿಲ್ಲ ಎಂದು ಹೇಳಿದರು.

ಸೆ. 10 ರಂದು ದೆಹಲಿಯಲ್ಲಿ ನಡೆದ ತಮ್ಮ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಶಿಂಧೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಭಯಭೀತನಾಗಿದ್ದೆ. ಆದರೆ ಯಾರಿಗೆ ಹೇಳುವುದು? ಈಗ ನಾನು ಈ ವಿಚಾರ ತಿಳಿಸುತ್ತಿದ್ದೇನೆ. 2008 ಮತ್ತು 2010ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಪಾಕಿಸ್ತಾನದ ಧ್ವಜಗಳು ಹಾರಿದ ಸಂದರ್ಭವನ್ನು ನಾನು ನೋಡಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

 

Share This Article