ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರಕ್ಕೆ ನೂರರಷ್ಟು ನೀರು ಸಿಗಲಿದೆ: ಮುನಿಯಪ್ಪ ವಿಶ್ವಾಸ

Public TV
1 Min Read

ಕೋಲಾರ : ಎತ್ತಿನಹೊಳೆ ಯೋಜನೆಯಲ್ಲಿ (Ettinahole Scheme) ಕೋಲಾರಕ್ಕೆ ನೂರಕ್ಕೆ ನೂರರಷ್ಟು ನೀರು ಸಿಗುತ್ತದೆ. ಯೋಜನೆಗಾಗಿ ಅನೇಕ ಹೋರಾಟಗಳು ಆಗಿವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಕೋಲಾರದ (Kolar) ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹ್ಮದ್ (Jameer Ahmed) ಮನೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ 20 ರಿಂದ 24 ಟಿಎಂಸಿ ನೀರು ಸಿಗಲಿದ್ದು, ಸಿಎಂ ಸಹ ಆಶ್ವಾಸನೆ ನೀಡಿದ್ದಾರೆ. ಮೊದಲು ಕುಡಿಯುವ ನೀರಿಗೆ ನೀರು ಹರಿಸಿ ಎರಡನೇ ಹಂತದಲ್ಲಿ ಕೆರೆಗಳಿಗೆ ಹರಿಸುವುದಾಗಿ, ಒಂದು ವರ್ಷದಲ್ಲಿ ಕೋಲಾರದ ನಂಗಲಿಯವರೆಗೂ ನೀರು ಹರಿಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ: ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ

ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ನೀರು ಹರಿಸಲಾಗುವುದು ಎಂದರು. ಅಲ್ಲದೆ ಹಾಸನದಿಂದ ನಮಗೆ ನೀರು ಹರಿಸಲು 16 ಟಿಎಂಸಿ ನೀರು ಸಾಕು, ಬಯಲು ಸೀಮೆಯ 7 ಜಿಲ್ಲೆಗಳಿಗೆ ಮೊದಲು ಕುಡಿಯುವ ನೀರು ಪೂರೈಕೆ, ಉಳಿದ ನೀರು ಕೆರೆಗೆ ಹರಿಸಲಾಗುವುದು, ಹೇಮಾವತಿಯಿಂದ ನೀರು ಆರಂಭವಾಗಲಿದ್ದು, ದಾರಿಯಲ್ಲಿ ಸಿಗುವ ಊರುಗಳಿಗೆ ನೀರು ಕೊಡಬೇಕಾಗಿದೆ, ಕೋಲಾರಕ್ಕೆ 3 ರಿಂದ 4 ಟಿಎಂಸಿ ನೀರು ಬರಲಿದೆ ಎಂದರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ ಕೇಸನ್ನ ಆತ್ಮಹತ್ಯೆ ಅಂತ ಬಿಂಬಿಸಲು ಯತ್ನಿಸಿದ್ದರು: ಸಿಬಿಐ ರಿಮ್ಯಾಂಡ್‌ ಕಾಪಿಯಲ್ಲಿ ರಹಸ್ಯ ಸ್ಫೋಟ!

ಕೊರಟಗೆರೆವರೆಗೂ ಕಾಲುವೆ ಮುಖಾಂತರ ನೀರು ಬರುತ್ತದೆ. ನಂತರ ದೊಡ್ಡಬಳ್ಳಾಪುರದಿಂದ ಪೈಪ್ ಲೈನ್ ಮಾಡಲಾಗುವುದು, ನೀರು ಕದಿಯುವರಿಗೆ ಕಠಿಣ ಶಿಕ್ಷೆ ನೀಡಲಾಗುವುದೆಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ – ಬಿ.ಸಿ ರೋಡ್‌ನಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ

Share This Article