‘ವಿಕ್ರಾಂತ್ ರೋಣ’ ಪಾರ್ಟ್ 2 ಮಾಡುವ ಬಗ್ಗೆ ಸುಳಿವು ಕೊಟ್ಟ ಅನೂಪ್ ಭಂಡಾರಿ

Public TV
1 Min Read

‘ವಿಕ್ರಾಂತ್ ರೋಣ’ (Vikrant Rona) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಮ್ಮೆ ಸುದೀಪ್ (Sudeep) ಜೊತೆ ಕೈಜೋಡಿಸಿದ್ದಾರೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾಗಾಗಿ ಜೊತೆಯಾಗುತ್ತಿದ್ದಾರೆ. ‘ವಿಕ್ರಾಂತ್ ರೋಣ 2’ ಬರುವ ಬಗ್ಗೆ ನಿರ್ದೇಶಕ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಜೊತೆಗೆ ಈ ಹಿಂದೆ ಸುದೀಪ್ ಜೊತೆ ‘ಅಶ್ವತ್ಥಾಮ’ ಚಿತ್ರಕ್ಕೆ ಅನೂಪ್‌ ನಿರ್ದೇಶನ ಮಾಡಬೇಕಿತ್ತು. ಆ ಪ್ರಾಜೆಕ್ಟ್ ಏನಾಯ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

‘ಅಶ್ವತ್ಥಾಮ’ ಸಿನಿಮಾ ಸುದೀಪ್ ಅವರ ಜೊತೆ ಮಾಡಬೇಕಿತ್ತು. ಅದು ವಿಕ್ರಾಂತ್ ರೋಣ ನಂತರ ಚಿತ್ರ ಮಾಡಲು ಪ್ಲ್ಯಾನ್ ಆಗಿತ್ತು. 2020ರಲ್ಲಿ ‘ವಿಕ್ರಾಂತ್ ರೋಣ’ ನನ್ನ ಹುಟ್ಟುಹಬ್ಬದ ದಿನವೇ ಶೂಟಿಂಗ್ ಶುರುವಾಗಿತ್ತು. ಎರಡೆರಡು ಬಾರಿ ಕೊವೀಡ್‌ನಿಂದ ಲಾಕ್‌ಡೌನ್ ಆಯ್ತು. ಶೂಟಿಂಗ್ ನಿಂತು ನಿಂತು ಒಂದೂವರೆ ವರ್ಷ ಪ್ಲ್ಯಾನ್ ಮಾಡಿದ ಪ್ರಾಜೆಕ್ಟ್ 4 ವರ್ಷ ತೆಗೆದುಕೊಂಡಿತ್ತು. ಚಿತ್ರೀಕರಣ ಬೇಗ ಮುಗಿದಿದ್ರೆ, ವಿಕ್ರಾಂತ್ ರೋಣ ಬಳಿಕ ‘ಅಶ್ವತ್ಥಾಮ’ ಸಿನಿಮಾ ಮಾಡುತ್ತಿದ್ವಿ ಎಂದು ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಮಾತನಾಡಿದ್ದಾರೆ.

ಅಷ್ಟರಲ್ಲಿ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಂತು ಅದರಲ್ಲಿ ಅಶ್ವತ್ಥಾಮ ಪಾತ್ರ ಹೈಲೆಟ್ ಆಯ್ತು. ಮತ್ತೊಂದು ‘ಅಶ್ವತ್ಥಾಮ’ ಸಿನಿಮಾ ಅನೌನ್ಸ್ ಆಯಿತು. ಅದಕ್ಕೆ ಮುಂದೆ ನೋಡೋಣ ಎಂದು ಹೋಲ್ಡ್ ಮಾಡಿದ್ವಿ. ಈಗ ನಮ್ಮ ಹತ್ತಿರ ‘ಬಿಲ್ಲಾ ರಂಗ ಭಾಷಾ’ (Billa Ranga Basha) ಇದೆ. ‘ವಿಕ್ರಾಂತ್ ರೋಣ 2’ ಮಾಡಬೇಕು ಅಂದ್ರು ಅದಕ್ಕೂ ಅವಕಾಶ ಇದೆ ಎಂದು ಸೀಕ್ವೆಲ್ ಬರುವ ಬಗ್ಗೆ ಸುಳಿವು ನೀಡಿದ್ದಾರೆ ಅನೂಪ್. ಹಾಗಾದ್ರೆ ಈ ಸಿನಿಮಾ ಬಗ್ಗೆಯೂ ಅಧಿಕೃತವಾಗಿ ಅನೌನ್ಸ್ ಆಗುತ್ತಾ? ಕಾದುನೋಡಬೇಕಿದೆ.

Share This Article