ಗುಜರಾತ್‍ನ ಕಚ್‍ನಲ್ಲಿ ನಿಗೂಢ ಜ್ವರಕ್ಕೆ 13 ಬಲಿ

Public TV
1 Min Read

ಗಾಂಧಿನಗರ: ಭಾರೀ ಮಳೆಯಿಂದ ಜರ್ಜರಿತವಾಗಿರುವ ಗುಜರಾತ್‍ನ (Fever) ಕಚ್ ಜಿಲ್ಲೆಯ ಲಖ್‍ಪತ್ ತಾಲೂಕಿನಲ್ಲಿ ಸೆಪ್ಟೆಂಬರ್ 3 ರಿಂದ 9ರ ವರೆಗೆ ಜ್ವರದಿಂದ (Fever) 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.

ಜ್ವರದಿಂದ ಬಳಲುತ್ತಿರುವವರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಆದರೆ ಜ್ವರವನ್ನು ನಿಖರವಾಗಿ ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗಿಲ್ಲ. ಜನರ ಸಾವಿಗೆ ಪ್ರಾಥಮಿಕವಾಗಿ ನ್ಯುಮೋನಿಟಿಸ್ ಕಾರಣ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ತಾಲೂಕಿನಲ್ಲಿ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸಲಾಗಿದೆ. ಎಚ್1ಎನ್1, ಮಲೇರಿಯಾ ಮತ್ತು ಡೆಂಗ್ಯೂ ಸಾಧ್ಯತೆಯನ್ನು ನಿಯಂತ್ರಿಸಲು 22 ವೈದ್ಯರ ತಂಡವನ್ನು ನಿಯೋಜಿಸಿ ಗ್ರಾಮಸ್ಥರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಪ್ರಾಥಮಿಕವಾಗಿ, ಸಾವುಗಳು ನ್ಯುಮೋನಿಟಿಸ್‍ನಿಂದ ಉಂಟಾಗಿವೆ ಎಂಬ ಶಂಕೆ ವ್ಯಕ್ತವಾಗಿದೆ. ಇದು ಮಾಲಿನ್ಯದಿಂದ ಕಾಣಿಸಿಕೊಂಡಿಲ್ಲ. ಅಲ್ಲದೇ ಸಾಂಕ್ರಾಮಿಕ ರೋಗದಂತೆ ತೋರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೋಗಿಗಳಿಗೆ ಜ್ವರ, ನೆಗಡಿ, ಕೆಮ್ಮು, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆ ಇದೆ ಎಂದು ಸ್ಥಳೀಯರು ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

Share This Article