ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್

Public TV
1 Min Read

ಕೊಲೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಅಮ್ಮ ಪವಿತ್ರಾ ಗೌಡರನ್ನು (Pavithra Gowda) ನೆನೆದು ಮಗಳು ಭಾವುಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮನ್ನು ತಾಯಿಯಾಗಿ ಪಡೆಯಲು ಪುಣ್ಯ ಮಾಡಿದ್ದೀನಿ ಎಂದು ಅಮ್ಮ ಪವಿತ್ರಾರನ್ನು ನೆನೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

ಯಾವುದೇ ಪರಿಸ್ಥಿತಿ ಇರಲಿ ನನ್ನ ಸಹಾಯಕ್ಕೆ ಬಂದೇ ಬರುತ್ತಾರೆ. ಈ ದಿನಗಳಲ್ಲಿ ನನಗೆ ಏನೇ ಬೇಕಿದ್ದರೂ ಅಮ್ಮ ನನ್ನ ಜೊತೆಗೆ ಇದ್ದಾಳೆ ಎಂದು ನನಗೆ ಗೊತ್ತು. ಹೀಗಾಗಿನೇ ಆಕೆಯನ್ನು ಬೆಸ್ಟ್ ಅಮ್ಮ ಎಂದು ಕರೆಯುವುದು. ನಿಮ್ಮನ್ನು ತಾಯಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ. ಲವ್ ಯೂ ಅಮ್ಮ ಎಂದು ಪುತ್ರಿ ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಆಗಿ ಪೋಸ್ಟ್ ಶೇರ್ ಮಾಡಿದ್ದಾರೆ.

ಇನ್ನೂ ತಾಯಿ ಪವಿತ್ರಾ ಗೌಡ ನಿರ್ವಹಿಸಿಕೊಂಡು ಹೋಗುತ್ತಿದ್ದ ಫ್ಯಾಷನ್ ಬೋಟಿಕ್ ಅನ್ನು ಈಗ ಪುತ್ರಿಯೇ ನೋಡಿಕೊಳ್ತಿದ್ದಾರೆ.

Share This Article