ಝೈದ್ ಖಾನ್‌ಗೆ ಮಲೈಕಾ ವಸುಪಾಲ್ ಹೀರೋಯಿನ್

By
1 Min Read

ಕಿರುತೆರೆ ನಟಿ ಮಲೈಕಾ ವಸುಪಾಲ್ (Malaika Vasupal) ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಜನರ ಮನ ಗೆದ್ದ ಮೇಲೆ ಹೊಸ ಸಿನಿಮಾಗಳ ಆಫರ್‌ಗಳು ಅರಸಿ ಬರುತ್ತಿವೆ. ‘ಬನಾರಸ್’ ಹೀರೋ ಝೈದ್ ಖಾನ್ (Zaid Khan) ನಟನೆಯ ಹೊಸ ಚಿತ್ರಕ್ಕೆ ಮಲೈಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮುದ್ದು ಮುಖದ ಚೆಲುವೆ ಮಲೈಕಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಅನಿಲ್ ಕುಮಾರ್ ನಿರ್ದೇಶಿಸುತ್ತಿರುವ ‘ಕಲ್ಟ್’ ಚಿತ್ರ ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ವೈರಲ್ ಆಗಿತ್ತು. ಇದೀಗ ಝೈದ್ ಖಾನ್ ಅವರ ‘ಬ್ಲಡ್ಡೀ ಲವ್’ಗೆ ರಚಿತಾ ರಾಮ್ ಬಳಿಕ ಮತ್ತೋರ್ವ ನಾಯಕಿಯಾಗಿ ಮಲೈಕಾ ಬಣ್ಣ ಹಚ್ಚುತ್ತಿದ್ದಾರೆ.

 

View this post on Instagram

 

A post shared by malaikatvasupal (@malaika_t_vasupal)

‘ಕಲ್ಟ್’ ಆ್ಯಕ್ಷನ್ ರೊಮ್ಯಾಂಟಿಕ್ ಜಾನರ್ ಚಿತ್ರವಾಗಿದ್ದು, ಈ ಪ್ರಾಜೆಕ್ಟ್ ಕುರಿತು ಇನ್ನಷ್ಟು ಮಾಹಿತಿ ಒಂದೊಂದಾಗೇ ಹೊರಬೀಳಲಿದೆ. ಒಂದೇ ಸಿನಿಮಾದಲ್ಲಿ ಝೈದ್ ಖಾನ್ ಜೊತೆ ರಚಿತಾ ರಾಮ್ (Rachita Ram) ಮತ್ತು ಮಲೈಕಾ ಈ ಮೂವರ ರೊಮ್ಯಾಂಟಿಕ್ ಸ್ಟೋರಿ ಇರುತ್ತದೆ ಎಂದು ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಭಿಮಾನಿಗಳು ಈ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ನಾನು ನಿರಪರಾಧಿ ಅಂತ ಸಾಬೀತುಪಡಿಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತೀನಿ: ನಟ ನಿವಿನ್ ಪೌಲಿ

ಅಂದಹಾಗೆ, ‘ಹಿಟ್ಲರ್ ಕಲ್ಯಾಣ’ ಸೀರಿಯಲ್ ಮೂಲಕ ಲೀಲಾ ಆಗಿ ಗುರುತಿಸಿಕೊಂಡ ಮಲೈಕಾ ಅವರು ಚಿಕ್ಕಣ್ಣಗೆ ನಾಯಕಿಯಾಗಿ ‘ಉಪಾಧ್ಯಕ್ಷ’ ಚಿತ್ರದಲ್ಲಿ ಮಿಂಚಿದರು. ಪ್ರಸ್ತುತ ‘ವಿದ್ಯಾಪತಿ’ ಮತ್ತು ‘ಕಲ್ಟ್’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

Share This Article