ಕಿರುತೆರೆಯಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕೃತಿ ಇಲ್ಲ- ನಟಿ ಕಾಮ್ಯಾ ಪಂಜಾಬಿ

Public TV
1 Min Read

ಮಾಲಿವುಡ್‌ನಲ್ಲಿ ಲೈಂಗಿಕ ದೌರ್ಜನ್ಯದ ವಿಚಾರದಿಂದ ಅಲ್ಲೋಲ ಕಲ್ಲೋಲವಾಗಿದೆ. ಇದರ ನಡುವೆ ‘ಏಕ್ ಪ್ರೇಮ್ ಕಹಾನಿ’ ಸೀರಿಯಲ್ ನಟಿ ಕಾಮ್ಯಾ ಪಂಜಾಬಿ (Kamya Panjabi) ಅವರು ಕಿರುತೆರೆ ಮಾತ್ರ ಶುದ್ಧವಾಗಿದೆ. ಸಿನಿಮಾರಂಗ ಹೇಗಿದ್ಯೋ ನನಗೆ ಗೊತ್ತಿಲ್ಲ. ಕಿರುತೆರೆಯಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕೃತಿ ಇಲ್ಲ ಎಂದು ಸಂದರ್ಶನವೊಂದರಲ್ಲಿ ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ರೋಹಿತ್ ಕೀರ್ತಿ ನಿರ್ದೇಶನದ ಚಿತ್ರಕ್ಕೆ ಪಾರು ಪಾರ್ವತಿ ಟೈಟಲ್

ಟಿವಿ (Television) ಜಗತ್ತು ಈಗ ತುಂಬಾನೇ ಶುದ್ಧವಾಗಿದೆ. ಕಿರುತೆರೆಯಲ್ಲಿ ಕೊಳಕು ಮನಸ್ಥಿತಿಯವರು ಯಾರು ಇಲ್ಲ ಎಂದಿದ್ದಾರೆ ನಟಿ ಕಾಮ್ಯಾ. ಪಾತ್ರಕ್ಕೆ ಇಲ್ಲಿ ಬೇಕಿರುವುದು ಕೇವಲ ಅರ್ಹತೆ ಮತ್ತು ಯೋಗ್ಯತೆ ಅಷ್ಟೇ ಎಂದಿದ್ದಾರೆ. ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೆ ಇಲ್ಲಿ ಅವಕಾಶ ನೀಡುತ್ತಾರೆ ಹೊರತು ಹಾಸಿಗೆ ಹಂಚಿಕೊಂಡರಷ್ಟೇ ಪಾತ್ರ ಕೊಡುವುದಾಗಿ ಇಲ್ಲಿ ಯಾರು ಹೇಳಲ್ಲ. ಒಳ್ಳೆಯ ಪಾತ್ರ ನೀಡೋದಾಗಿ ಮಂಚಕ್ಕೆ ಕರೆಯುವ ಸ್ವಭಾವ ಕಿರುತೆರೆಯಲ್ಲಿ ಇಲ್ಲ ಎಂದಿದ್ದಾರೆ.

ಚಿತ್ರರಂಗದಲ್ಲಿ ಹೆಣ್ಣಿನ ಸಮ್ಮತಿಯಿಲ್ಲದೇ ಈ ತರಹದ ಘಟನೆ ನಡೆಯಲು ಸಾಧ್ಯವಿಲ್ಲ. ನಮ್ಮ ಜೊತೆ ಮಲಗಲೇಬೇಕು ಎಂದು ಇಲ್ಲಿ ಯಾರು ಯಾರನ್ನೂ ಬಲವಂತ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಯಾರಾದರೂ ಮುಟ್ಟಿದರೆ ಅವರ ಸ್ಪರ್ಶದಲ್ಲಿ ಕಾಮದ ಬಯಕೆ ಇದೇ ಎಂದು ಅನಿಸಿದಾಗ ನೇರವಾಗಿಯೇ ನನಗೆ ಇದೆಲ್ಲ ಇಷ್ಟ ಇಲ್ಲ ಎಂದು ಹೇಳಿದರೆ ಅದು ಅಲ್ಲಿಗೆ ಮುಗಿಯುತ್ತೆ ಆ ನಂತರ ಅವರು ಮತ್ತೆ ನಿಮ್ಮನ್ನು ಮುಟ್ಟಲು ಬರುವುದಿಲ್ಲ ಎಂದು ನಟಿ ಕಾಮ್ಯಾ ಪಂಜಾಬಿ ಮಾತನಾಡಿದ್ದಾರೆ.

ಅನೇಕರು ನಮಗೆ ಕಹಿ ಅನುಭವವಾಗಿದೆ. ನಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳುತ್ತಾರೆ. ಆದರೆ ನಾನು ಆಗಲೇ ಹೇಳಿದಂತೆ ಹುಡುಗಿ ಬಯಸದೇ ಇದ್ದರೆ, ಒಪ್ಪದೇ ಇದ್ದರೆ ಇದೆಲ್ಲ ನಡೆಯಲ್ಲ ಎಂದಿದ್ದಾರೆ. ಇನ್ನೂ ನಾನು ನನ್ನ ಈ ಸುಧೀರ್ಘ ಪ್ರಯಾಣದಲ್ಲಿ ಸುಮಾರು ಹೆಣ್ಣು ಬಾಕರನ್ನು ನಾನು ನೋಡಿದ್ದೇನೆ. ಆದರೆ ನಮ್ಮ ಒಪ್ಪಿಗೆ ಇಲ್ಲದೆ ಇಲ್ಲಿಯೇನು ನಡೆಯಲ್ಲ ಎಂದು ನೇರವಾಗಿ ಮಾತನಾಡಿದ್ದಾರೆ. ಕಿರುತೆರೆಯಲ್ಲಿಯಂತೂ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕೃತಿ ಇಲ್ಲ. ಸಿನಿಮಾರಂಗ ಹೇಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Share This Article