ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಮಲ್ ಹಾಸನ್- ಅಟ್ಲಿ ಆ್ಯಕ್ಷನ್ ಕಟ್

Public TV
1 Min Read

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಸಕ್ಸಸ್‌ಗಾಗಿ ಹೊಸ ತಂತ್ರ ರೂಪಿಸಿದ್ದಾರೆ. ಸೌತ್ ನಿರ್ದೇಶಕರ ಜೊತೆ ಕೆಲಸ ಮಾಡಲು ಸಲ್ಮಾನ್ ಉತ್ಸಾಹ ತೋರಿಸುತ್ತಿದ್ದಾರೆ. ಸದ್ಯ ತಮಿಳು ಡೈರೆಕ್ಟರ್ ಅಟ್ಲಿ (Atlee) ನಿರ್ದೇಶನದಲ್ಲಿ ಮೂಡಿ ಬರಲಿರುವ ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಕಮಲ್ ಹಾಸನ್ ಸಾಥ್‌ ನೀಡಲಿದ್ದಾರೆ.

ಶಾರುಖ್ ಖಾನ್ ನಟಿಸಿದ್ದ ‘ಜವಾನ್’ ಚಿತ್ರಕ್ಕೆ ನಿರ್ದೇಶನ ಮಾಡಿ ಗೆದ್ದಿದ್ದ ತಮಿಳು ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಸಲ್ಮಾನ್ ಕೈಜೋಡಿಸಿದ್ದಾರೆ. ಇದೇ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರವೊಂದರಲ್ಲಿ ಕಮಲ್ ಹಾಸನ್ (Kamal Haasan) ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮತ್ತೆ ಸಿನಿಮಾಗೆ ದೀಪಿಕಾ ದಾಸ್ ಕಮ್‌ಬ್ಯಾಕ್- ‘ಪಾರು ಪಾರ್ವತಿ’ ಸಿನಿಮಾದಲ್ಲಿ ನಟಿ

ಸಲ್ಮಾನ್ ಮತ್ತು ಕಮಲ್ ಹಾಸನ್ ಇಬ್ಬರಿಗೂ ಸಮಾನವಾದ ಪಾತ್ರವಿದೆಯಂತೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಾರೆ ಎಂಬುದು ಲೇಟೆಸ್ಟ್ ನ್ಯೂಸ್. ಆದರೆ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸುವ ಕುರಿತು ಸುದ್ದಿ ನಿಜನಾ? ಎಂಬುದನ್ನು ನಟನಾಗಲಿ ಅಥವಾ ಡೈರೆಕ್ಟರ್ ಅಟ್ಲಿ ಆಗಲಿ ಅಧಿಕೃತವಾಗಿ ತಿಳಿಸಿಲ್ಲ. ಸದ್ಯ ಈ ಸುದ್ದಿ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೇಳಿದ ಸುದ್ದಿ ನಿಜವಾಗಲಿ ಎಂದು ಫ್ಯಾನ್ಸ್‌ ಎದುರು ನೋಡ್ತಿದ್ದಾರೆ.

ಇನ್ನೂ ಸಾಲು ಸಾಲು ಸಿನಿಮಾಗಳು ಸೋತ ಬೆನ್ನಲ್ಲೇ ಸೌತ್‌ನ ಸ್ಟಾರ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಸಲ್ಮಾನ್ ಖಾನ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. `ಸಿಖಂದರ್’ ಆಗಿ ಸಲ್ಮಾನ್ ಮಿಂಚಲಿದ್ದು, ಈ ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.

Share This Article