Shivaji Statue Collapse| ಗುತ್ತಿಗೆದಾರ, ರಚನಾ ಸಲಹೆಗಾರ ಅರೆಸ್ಟ್

By
1 Min Read

ಮುಂಬೈ: ಮಹಾರಾಷ್ಟ್ರದಲ್ಲಿ ಕುಸಿದು ಬಿದ್ದ ಛತ್ರಪತಿ ಶಿವಾಜಿ(Chhatrapati Shivaji Maharaj) ಕಂಚಿನ ಪ್ರತಿಮೆ ನಿರ್ಮಿಸಿದ ಗುತ್ತಿಗೆದಾರ ಮತ್ತು ರಚನೆಗೆ ಸಲಹೆ ನೀಡಿದ ಸಲಹೆಗಾರನನ್ನು ಬಂಧಿಸಲಾಗಿದೆ.

ಡಿಸೆಂಬರ್ 4,2023 ರಂದು ನೌಕಾ ದಿನದಂದು (Navy Day) ಸಿಂಧುದುರ್ಗದಲ್ಲಿ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಅನಾವರಣ ಮಾಡಲಾಗಿತ್ತು. ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದರು. ಮರಾಠ ನೌಕಾಪಡೆ, ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆ, ಅದರ ಐತಿಹಾಸಿಕ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ಕಂಚಿನ ಪ್ರತಿಮೆ ನಿರ್ಮಿಸಲಾಗಿತ್ತು. ಇದನ್ನೂ ಓದಿ: ಆಂಧ್ರ ಕಾಲೇಜಿನ ವಿದ್ಯಾರ್ಥಿನಿಯರ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ – ಆರೋಪಿ ಅರೆಸ್ಟ್

ಪ್ರತಿಮೆ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಈ ಘಟನೆಯ ಬಳಿಕ ವಿಪಕ್ಷಗಳು ಆಡಳಿತರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಮಾತ್ರವಲ್ಲದೇ ಶಿವಾಜಿ ವಂಶಸ್ಥರು ಈ ಘಟನೆಯ ಬಳಿಕ ಸರ್ಕಾರದ ಆಕ್ರೋಶ ಹೊರಹಾಕಿದ್ದಾರೆ.

ಈ ಹಾನಿಯ ತನಿಖೆಗಾಗಿ ಭಾರತೀಯ ನೌಕಾಪಡೆಯ ನೇತೃತ್ವದಲ್ಲಿ  ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ಮತ್ತು ತಾಂತ್ರಿಕ ತಜ್ಞರೊಂದಿಗೆ ಸಮಿತಿಯನ್ನು ರಚಿಸಲಾಗುತ್ತಿದೆ. ಇದನ್ನೂ ಓದಿ: ಮಾಜಿ ಮುಡಾ ಆಯುಕ್ತನಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್!

Share This Article